ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಮಾನ ದುರಂತ: ಘಟನಾ ಸ್ಥಳದಲ್ಲಿ ಕಳ್ಳರ ಹಾವಳಿ (Mangalore | Flight crash | Gold | Bajpe | Steal)
Bookmark and Share Feedback Print
 
ಮಂಗಳೂರಿನಲ್ಲಿ ನಡೆದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಿಂದಾಗಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಪೊಲೀಸರಿಗೆ, ಕಳ್ಳಕಾಕರ ಮೇಲೆ ಹದ್ದಿನ ಕಣ್ಣಿಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಗಲ್ಫ್‌ನಿಂದ ಆಗಮಿಸುವ ಪ್ರಯಾಣಿಕರು, ಆಭರಣಗಳ ಅಥವಾ 24- ಕ್ಯಾರೆಟ್ ಬಿಸ್ಕಿಟ್‌ ರೂಪದಲ್ಲಿ ಚಿನ್ನವನ್ನು ಸಂಬಂಧಿಕರಿಗೆ ಅಥವಾ ಗೆಳೆಯರಿಗಾಗಿ ತರುವುದು ಸಂಪ್ರದಾಯ. ಪೊಲೀಸರು ಘಟನಾ ಸ್ಥಳವನ್ನು ಸುತ್ತುವರೆದಿದ್ದು, ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ಹಾಗೂ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಹರಸಾಹಸ ಪಡುತ್ತಿದ್ದಾರೆ.

ಬಜಪೆ ಪೊಲೀಸರು ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಸಂಗ್ರಹಿಸಿ ಮೊಹರು ಮಾಡಲಾಗಿದೆ. ಆದರೆ ಪರಿಹಾರ ಕಾರ್ಯದ ನೆಪದಲ್ಲಿ ತೊಡಗಿದ್ದ ಕೆಲವರು, ದುಬಾರಿ ವಸ್ತುಗಳನ್ನು ಕಳ್ಳತನ ಮಾಡಿರುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಿಮಾನ ಅಪಘಾತವಾದ ಆರಂಭದ 30 ನಿಮಿಷಗಳಲ್ಲಿ, ಎಲ್ಲರು ಆಘಾತದಲ್ಲಿರುವಾಗ ಕೆಲವು ಬೆಲೆಬಾಳುವ ವಸ್ತುಗಳನ್ನು ದೋಚಿರುವ ಸಾಧ್ಯತೆಗಳಿವೆ. ನಂತರ ಜನನಿಬಿಡತೆಯಲ್ಲಿ ಹೆಚ್ಚಳವಾಯಿತು. ಆದರೆ, ಪ್ರಯಾಣಿಕರನ್ನು ಉಳಿಸುವದು ನಮ್ಮ ಮೊದಲ ಆದ್ಯತೆಯಾಗಿತ್ತು ಎಂದು ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ