ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೈಲಿನಲ್ಲಿ 1 ತಿಂಗಳು ಕಳೆದ ನಿತ್ಯಾನಂದ; ದಿನಚರಿ ಹೇಗಿದೆ... (Nithayananda | Ranjitha | CID | High court | Police | Bidadi)
Bookmark and Share Feedback Print
 
PTI
ನಟಿ ರಂಜಿತಾಳ ಜೊತೆ ರಾಸಲೀಲೆ ನಡೆಸಿ ಸಿಕ್ಕಿಬಿದ್ದಿರುವ ಕಾಮಿಸ್ವಾಮಿ ನಿತ್ಯಾನಂದ ಇದೀಗ ರಾಮನಗರ ಜೈಲಿನಲ್ಲಿ ಸುಮಾರು ಒಂದು ತಿಂಗಳು ಹತ್ತು ದಿನಗಳ ಕಾಲ ಕಳೆದಿದ್ದು, ಸದ್ಯಕ್ಕೆ ಬಿಡುಗಡೆಯ ಭಾಗ್ಯ ದೊರಕಿಲ್ಲ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಸಂಖ್ಯಾತ ಭಕ್ತರಿಗೆ ನಗು ಮೊಗದ ದರ್ಶನ ನೀಡುತ್ತಿದ್ದ ನಿತ್ಯಾನಂದ ಜೈಲುಕಂಬಿಯ ಹಿಂದೆಯೂ ಹಸನ್ಮುಖಿಯಾಗಿಯೇ ತಮ್ಮ ದಿನವನ್ನು ಕಳೆಯುತ್ತಿದ್ದಾರಂತೆ! ಬೆಳಿಗ್ಗೆ ಐದು ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸುವ ಸ್ವಾಮಿ ಕಾಫಿ, ಟೀ ಕುಡಿಯಲ್ವಂತೆ, ಎಂದಿನ ಪರಿಪಾಠದಂತೆ ಧ್ಯಾನ ಮಾಡಿ ಪುಸ್ತಕ ಓದುವುದರಲ್ಲಿ ಮಗ್ನರಾಗುವುದಾಗಿ ಜೈಲರ್ ರಾಮಯ್ಯ ವಿವರಣೆ.

ಜೈಲಿನಲ್ಲಿ ಪೂಜೆ, ಪುನಸ್ಕಾರಕ್ಕೆ ಅವಕಾಶ ಇಲ್ಲದ ಕಾರಣ ಅವರು ಬೆಳಿಗ್ಗೆ ಧ್ಯಾನ, ಯೋಗದಲ್ಲಿಯೇ ಕಾಲ ಕಳೆಯುತ್ತಾರಂತೆ. ನಂತರ ಮಧ್ಯಾಹ್ನ ಇಡ್ಲಿ, ಡ್ರೈಪ್ರೂಟ್ಸ್ ಸೇವನೆ, ಮತ್ತೆ ಪುಸ್ತಕ ಓದು, ರಾತ್ರಿ ಚಪಾತಿ ಪಲ್ಯ, ಅನ್ನ ಸಾಂಬಾರ ಸೇವನೆ, ಹತ್ತು ಗಂಟೆಗೆ ನಿದ್ದೆ.

ರಾಸಲೀಲೆ ಆರೋಪ ಹೊತ್ತು ಸಿಐಡಿ ಅಧಿಕಾರಿಗಳು ಬಂಧಿಸಿದಾಗ ಎದೆನೋವು, ತನಿಖೆಯ ವೇಳೆ ನಿದ್ದೆಗೆ ಜಾರುವುದು ಹೀಗೆ ಹಲವು ನಾಟಕವಾಡಿ ಸಿಐಡಿ ಅಧಿಕಾರಿಗಳಿಗೆ ಸಾಕಷ್ಟು ತಲೆನೋವು ತಂದಿದ್ದ ನಿತ್ಯಾನಂದ ಈಗ ಜೈಲಿನ ವಾತಾವರಣಕ್ಕೆ ಹೊಂದಿರುವುದಾಗಿ ರಾಮಯ್ಯ ಹೇಳಿದ್ದಾರೆ. ಮೊದಲು ಆಶ್ರಮದ ಊಟವೇ ಬೇಕೆಂದು ಹಠ ಹಿಡಿದ ಸ್ವಾಮಿ ನಂತರ ಜೈಲಿನ ಉಪಾಹಾರವನ್ನೇ ಸೇವಿಸುತ್ತಿರುವುದಾಗಿಯೂ ಅವರು ಹೇಳಿದರು.

ಏತನ್ಮಧ್ಯೆ ನಿತ್ಯಾನಂದ ಸ್ವಾಮಿ ತನಗೆ ಜಾಮೀನು ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು ಕೂಡ, ತನಿಖೆಗೆ ನಟಿ ರಂಜಿತಾ ಅವರು ಹಾಜರಾಗಿ ವಿವರಣೆ ನೀಡುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದೆಂದು ಸಿಐಡಿ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ ಪರಿಣಾಮ ಕೋರ್ಟ್ ಜಾಮೀನು ನಿರಾಕರಿಸಿತ್ತು. ಆದರೆ ಈವರೆಗೂ ನಟಿ ರಂಜಿತಾ ಸಿಐಡಿ ಅಧಿಕಾರಿಗಳ ಮುಂದೆಯಾಗಲಿ, ಕೋರ್ಟ್ ಎದುರು ಹಾಜರಾಗಿಲ್ಲದಿರುವುದು ನಿತ್ಯಾನಂದಗೆ ಜಾಮೀನು ದೊರೆಯುವಲ್ಲಿ ತೊಡಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ