ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಆಡ್ವಾಣಿ ಮಾತಿಗೆ ಹೆಗ್ಡೆ ರಾಜೀನಾಮೆ ವಾಪಸ್, ಇದು ಅವಮಾನ' (Advani | BJP | Yeddyurappa | Congress | Babri | Santhosh hegde)
Bookmark and Share Feedback Print
 
'ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಕಾರಣರಾದ ಆಡ್ವಾಣಿಯವರ ಮಾತು ಕೇಳಿ ರಾಜೀನಾಮೆ ವಾಪಸ್ ಪಡೆದಿದ್ದು ಸರಿಯೇ'? ಇದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರಿಗೆ ಸಾರ್ವಜನಿಕರ ಗುಂಪಿನಿಂದ ತೂರಿ ಬಂದ ಪ್ರಶ್ನೆ. ಆದರೆ ಆ ಧ್ವನಿ ಯಾರದ್ದು, ಎಲ್ಲಿಂದ ಎಂಬ ಬಗ್ಗೆ ಗಮನಕೊಡದ ಹೆಗ್ಡೆ ಅದು ನಿಮ್ಮ ಅಭಿಪ್ರಾಯ ಎಂದಷ್ಟೇ ಹೇಳಿ ಉತ್ತರ ನೀಡಿ ಹೊರಟ ಘಟನೆ ನಡೆದಿದೆ.

ಭಾರತದ ಸಂವಿಧಾನಕ್ಕೆ 60 ವರ್ಷ ತುಂಬಿದ ನೆನಪಿಗೆ ಎಸ್.ಎಂ.ಕೃಷ್ಣ ಸ್ಮರಣ ಸಂಸ್ಥೆ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಾದ್ಯಂತ ವರ್ಷಪೂರ್ತಿ ಉಪನ್ಯಾಸ ಮಾಲೆ ಮತ್ತು ವಿಚಾರಣ ಸಂಕಿರಣದ ಉದ್ಘಾಟನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಈ ಪ್ರಶ್ನೆ ಸಾರ್ವಜನಿಕರಿಂದ ತೂರಿ ಬಂದಿತ್ತು.

ಲೋಕಾಯುಕ್ತರು ಬಿಜೆಪಿ ಮುಖಂಡರ ಮಾತು ಕೇಳುವ ಮೂಲಕ ಆರು ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಪ್ರಗತಿಪರ ಚಿಂತಕರು, ಸಾಹಿತಿಗಳನ್ನೊಳಗೊಂಡ ರಾಜ್ಯದ ಜನತೆಯ ಆಗ್ರಹವನ್ನು ಕಡೆಗಣಿಸಿದ ಅವರು ಆಡ್ವಾಣಿಯರ ಮಾತಿನಿಂದ ನಿರ್ಧಾರ ಬದಲಿಸಿರುವುದು ತುಂಬಾ ನೋವಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಎಸ್.ವಿ.ನರಸಿಂಹಯ್ಯ ಅವರು ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದರು.

ಲೋಕಾಯುಕ್ತರ ಬಗ್ಗೆ ನಮಗೆ ಗೌರವವಿದೆ. ಆದರೆ ಆಡ್ವಾಣಿಯವರು ತಂದೆಗೆ ಸಮಾನ ಎಂದು ಹೇಳಿಕೊಂಡ ಹೆಗ್ಡೆಯವರಿಂದ ಬೇಲೀಕೇರಿ ಅಕ್ರಮ ಅದಿರು ಸಾಗಾಣೆ ಪ್ರಕರಣವನ್ನು ಇನ್ನು ಮುಂದೆ ನ್ಯಾಯಯುತವಾಗಿ ನಿಭಾಯಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ರಾಜ್ಯಪಾಲರ ಕ್ಷಮೆ ಕೇಳ್ತೇನೆ-ಹೆಗ್ಡೆ: ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ. ಸೋಮವಾರ ಅಥವಾ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ