ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಜಾಲಿ ಮೂಡ್! ದೋಣಿ ವಿಹಾರ, ಆನೆ ಸವಾರಿ (BJP | Yeddyurappa | Congress | Shiv moga | JDS)
Bookmark and Share Feedback Print
 
PTI
ವಿರೋಧಪಕ್ಷಗಳ ಜತೆಗಿನ ಜಂಗೀಕುಸ್ತಿಯ ನಡುವೆಯೇ ಬಿಡುವು ಮಾಡಿಕೊಂಡು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಜಾಲಿ ಮೂಡ್‌‌ನಲ್ಲಿದ್ದು, ತುಂಗಾ ಜಲಾಶಯದಲ್ಲಿ ದೋಣಿ ವಿಹಾರ ಮಾಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ನಂತರ ಸಕ್ರೆಬೈಲ್‌ನಲ್ಲಿ ಜಂಗಲ್ ಕ್ಯಾಂಪ್ ಉದ್ಘಾಟನೆ ನೆರವೇರಿಸಿದ ಅವರು, ಆನೆ ಮೇಲೆ ಕುಳಿತು ಸವಾರಿ ಮಾಡಿದರು. ಕಳೆದ ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಕೋಪ-ತಾಪದೊಂದಿಗೆ ಉಗ್ರ ಪ್ರತಾಪ ತೋರಿಸಿಬಿಟ್ಟಿದ್ದರು.

ಹಾಗಾಗಿ ಸ್ವಲ್ಪ ಶಾಂತವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಭಾನುವಾರ ಬೆಳಗ್ಗಿನಿಂದಲೇ ಹಸನ್ಮುಖಿಯಾಗಿಯೇ ಇದ್ದರು. ಶಿವಮೊಗ್ಗದಲ್ಲಿ ಬೆಳಗ್ಗೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿದರು.

ನಂತರ ಆರ್ಎಸ್ಎಸ್ ಕಚೇರಿಗೆ ಹೋಗಿ ಅಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸಿದರು.ಆಮೇಲೆ ಮುಖ್ಯಮಂತ್ರಿಗಳು ದೋಣಿ ವಿಹಾರ, ಆನೆ ಸವಾರಿ ಹೀಗೆ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿ ದಿನ ಕಳೆದರು.
ಸಂಬಂಧಿತ ಮಾಹಿತಿ ಹುಡುಕಿ