ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆದರ್ಶ ಸಮಾಜ ಕಟ್ಟಬೇಕಾಗಿದೆ: ಶ್ರೀ ಚಾರುಕೀರ್ತಿ ಭಟ್ಟಾರಕ (Hassan | Shravana belagola | Charu kirthi | Dhavala Grantha)
Bookmark and Share Feedback Print
 
ಎಲ್ಲರೂ ಒಗ್ಗಟ್ಟಿನಿಂದ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಉತ್ತಮ ಸಮಾಜ ಕಟ್ಟಬೇಕು ಎಂದು ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕರೆ ನೀಡಿದ್ದಾರೆ.

ಹನ್ನೆರಡು ವರ್ಷಗಳ ಬಳಿಕ ನಗರಕ್ಕೆ ಮಂಗಳ ಪ್ರವೇಶ ಮಾಡಿದ ಶ್ರೀಗಳು, ಮಹಾವೀರ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯರಲ್ಲಿ ಧಾರ್ಮಿಕ ಪರಂಪರೆ ಮುಂದುವರಿಯುವುದರ ಜತೆಗೆ ಮಾನಸಿಕ ಪರಿವರ್ತನೆ ಆಗಬೇಕು. ಆ ಮೂಲಕ ಆದರ್ಶ ಸಮಾಜ ನಿರ್ಮಿಸಬೇಕು. ತಾಯಿ, ತಂದೆಯನ್ನು ವೃದ್ದಾಶ್ರಮಕ್ಕೆ ಕಳುಹಿಸುವ ಪ್ರವೃತ್ತಿ ಕೈಬಿಟ್ಟು ಅವರ ಸೇವೆ ಮಾಡುವ ಮೂಲಕ ಗೌರವಿಸಬೇಕು. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದರು.

ಪೂಜೆಗಷ್ಟೇ ಸೀಮಿತವಾಗಿದ್ದ ಧವಳ ಗ್ರಂಥವನ್ನು ಅನುವಾದ ಮಾಡಬೇಕು ಎಂಬ ಕೊರಗು ಕಾಡುತ್ತಿತ್ತು. ಸುದೀರ್ಘ ಹನ್ನೆರೆಡು ವರ್ಷಗಳ ಶ್ರಮದ ಬಳಿಕ 36 ಸಂಪುಟದ ಅನುವಾದ ಕೆಲಸ ಪೂರ್ಣಗೊಂಡಿದೆ. ಆ ಮೂಲಕ ಕೊರಗು ನಿವಾರಣೆಯಾಗಿದೆ ಎಂದು ಹೇಳಿದರು.

ತ್ಯಾಗಿಗಳು, ವಿದ್ವಾಂಸರು, ಆಸಕ್ತರಿಗೆ ಧವಳ ಗ್ರಂಥದ ಕನ್ನಡ ಅನುವಾದ ದೊರೆಯಬೇಕು ಎಂಬ ಅಭಿಲಾಷೆ ಈಡೇರಿದೆ. ಒಂದು ಸಂಪುಟ ಹೊರ ಬಂದ ಕೂಡಲೇ ಮತ್ತೊಂದು ಯಾವಾಗ ಬಿಡುಗಡೆ ಆಗುತ್ತದೆ ಎಂದು ಬಹಳಷ್ಟು ಜನ ಪ್ರಶ್ನಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಧವಳ ಗ್ರಂಥದ ಅನುವಾದದ ಹಿಂದೆ ಕಟ್ಟಡ ಕಟ್ಟಿದಷ್ಟು ಶ್ರಮವಿದೆ. ಅನುಭವ ಹೊಂದಿದ ವಿದ್ವಾಂಸರು, ಪ್ರಾಕೃತ ಮತ್ತು ಸಂಸ್ಕೃತದ ಅರಿವು ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿದವರು ವಿರಳವಾದ್ದರಿಂದ ಆಸಕ್ತರಿಗೆ ವಿಶೇಷ ತರಬೇತಿ ಕೊಡಿಸಿ ಗ್ರಂಥ ಅನುವಾದದ ಕೆಲಸ ಪೂರ್ಣಗೊಳಿಸಲು ವಿಳಂಬವಾಯಿತು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ