ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್ ಶಾಸಕ ಅಶ್ವತ್ಥ ವಿರುದ್ಧ ಅಸಮಾಧಾನ (JDS | Ashwath | Deve gowda | Kumaraswamy)
Bookmark and Share Feedback Print
 
ನಾವು ಶ್ರಮದಿಂದ ಬೆಳಸಿದ 'ಅಶ್ವತ್ಥ' ವೃಕ್ಷ ಪರರಿಗೆ ನೆರಳು ನೀಡುತ್ತಿದೆ. ಅದರ ಬುಡಕ್ಕೆ ಕೊಡಲಿ ಏಟು ನೀಡಿ, ಮತ್ತೊಂದು ಗಿಡ ನೆಡುವುದು ಅನಿವಾರ್ಯ. ಇದು ಕ್ಷೇತ್ರದ ಶಾಸಕ ಎಂ.ಸಿ. ಅಶ್ವತ್ಥ್ ಅವರ ಕಾರ್ಯವೈಖರಿ ಬಗ್ಗೆ ಮುನಿಸಿಕೊಂಡಿರುವ ಕಾರ್ಯಕರ್ತರ ಅಸಮಾಧಾನದ ನುಡಿ.

ಅಶ್ವತ್ಥ್ ಅವರು ಶಾಸಕರಾದ ನಂತರ ಅವರಲ್ಲಿ ಪಕ್ಷ ವ್ಯಾಮೋಹ ಕಡಿಮೆಯಾಗಿ, ಹಣದ ಮೋಹ ಹೆಚ್ಚಿದೆ. ಅವರ ಶ್ರೇಯಸ್ಸಿಗೆ ನಾವು ಹಗಲಿರುಳು ದುಡಿದೆವು. ಜನತೆ, ಶ್ರಮಕ್ಕೆ ತಕ್ಕ ಬೆಲೆ ಕೂಡ ನೀಡಿದರು. ಆದರೆ ಪಕ್ಷದ ಕಾರ್ಯಕರ್ತರು, ಮುಖಂಡರು ಜನರ ಬಳಿ ಬೆಲೆ ಉಳಿಸಿಕೊಳ್ಳುವಲ್ಲಿ ಅಶ್ವತ್ಥ್ ಅಸಮರ್ಥರಾಗಿದ್ದಾರೆ ಎಂದು ದೂರಿದ್ದಾರೆ.

ವಿಪರ್ಯಾಸವೆಂದರೆ ಅಶ್ವತ್ಥ ತಮ್ಮ ಕುಟುಂಬ ಹಾಗೂ ನಮ್ಮ ವಿರೋಧಿಗಳನ್ನು ಉಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಶಾಸಕ ಅಶ್ವತ್ಥ್ ಅವರ 15ಕ್ಕೂ ಹೆಚ್ಚು ಮಂದಿ ಆತ್ಮೀಯರು, ಹಿತೈಷಿಗಳು ಹಾಗೂ ಹಲವು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

`ಅವರನ್ನು ಶಾಸಕರನ್ನಾಗಿ ಮಾಡಲು ನಾವು ಕಂಡಕಂಡವರ ಕೈ ಕಾಲು ಕಾಲು ಹಿಡಿದಿದ್ದೇವೆ. ಶತ ಪ್ರಯತ್ನದಿಂದ ಶಾಸಕರನ್ನಾಗಿಯೂ ಮಾಡಿದ್ದೇವೆ. ಆ ನಂತರ ಅಶ್ವತ್ಥ್ಗೆ ಅವರ ಸೋದರ ಕರಿಯಪ್ಪ ಮತ್ತು ಬಿಜೆಪಿ ಬೆಂಬಲಿಗ, ಗುತ್ತಿಗೆದಾರ ಅಣಿಗೆರೆ ಸಿದ್ದರಾಜು ಅವರನ್ನು ಬಿಟ್ಟರೆ ಬೇರಾರೂ ಬೇಡವಾಗಿದೆ. ಶಾಸಕರಿಂದಲೇ ಜೆಡಿಎಸ್ಗೆ ಕಳಂಕ ಅಂಟಿಕೊಳ್ಳುತ್ತಿದೆ. ಆದ್ದರಿಂದ ವರಿಷ್ಠರ ಗಮನ ಸೆಳೆಯಲು ತಾಲೂಕಿನಲ್ಲಿ `ಜೆಡಿಎಸ್ ಉಳಿಸಿ ಆಂದೋಲನ' ಹಮ್ಮಿಕೊಳ್ಳಲೇಬೇಕಿದೆ. ಇಂಥ ಅಂದೋಲನದಿಂದ ಮಾತ್ರ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಉಳಿಯಲು ಸಾಧ್ಯ' ಎಂದು ಮುಖಂಡರು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ