ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆನೇಕಲ್-ಕಾಂಗ್ರೆಸ್ ಸೋಲಿಗೆ ಕಚ್ಚಾಟ ಕಾರಣ: ರಾಮಲಿಂಗಾ ರೆಡ್ಡಿ (Congress | BJP | Yeddyurappa | Illigal Mining | Anekal)
Bookmark and Share Feedback Print
 
ಆಂತರಿಕ ಕಚ್ಚಾಟ ಹಾಗೂ ಮುಖಂಡರು ಎಸೆಗಿದ ತಪ್ಪಿನಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಆನೇಕಲ್ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಯಿತು ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

ತಾಲೂಕಿನ ಚಂದಾಪುರದಲ್ಲಿ ಕಾಂಗ್ರೆಸ್‌ನ ಗ್ರಾಮಾಂತರ ಬ್ಲಾಕ್ ಕಚೇರಿಯನ್ನು ಉದ್ಘಾಟಿಸಿದ ನಂತರ ಬಿಜೆಪಿ ಪಕ್ಷ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ದುರಾಡಳಿತ ನಡೆಸುತ್ತಿದೆ. ಈ ಅನೀತಿಯನ್ನು ಮತದಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರಕಾರವನ್ನು ಕಿತ್ತೆಸೆಯಲು ಚಿಂತಿಸಿದ್ದಾನೆ. ಬಿಜೆಪಿಯ ಕೆಟ್ಟವರ್ತನೆಯಿಂದ ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ನಡೆಯುವ ಪರಿಸ್ಥಿತಿ ಉಂಟಾಗಿದೆ. ಪಕ್ಷ ಆಡಳಿತದಲ್ಲಿದ್ದರೂ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ನತ್ತ ಮುಖಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಅಹಂನಿಂದ ಬಿಜೆಪಿ ಶಾಸಕರು ಸದನದಲ್ಲಿ ಅಸಭ್ಯವಾಗಿ ವರ್ತಿಸುತಿದ್ದಾರೆ. ಗಣಿಗಾರಿಕೆಯಲ್ಲಿ ತೊಡಗಿರುವವರ ಜತೆ ಮುಖ್ಯಮಂತ್ರಿಯೂ ಷಾಮೀಲಾಗಿದ್ದು, ಬೇಲೆಕೇರಿ ಬಂದರು ಅಕ್ರಮ ಅದಿರು ಪ್ರಕರಣದಲ್ಲಿ ಪಾಲು ಪಡೆಯುತ್ತಿದ್ದಾರೆ ಎಂದು ದೂರಿದರು.

ಎಲ್ಲ ಅಧಿಕಾರಿಗಳು ಗಣಿ ಲಾಬಿಗೆ ಮಣಿದು ಅದಿರು ರಫ್ತಿಗೆ ಅಕ್ರಮ ಪರವಾನಗಿ ನೀಡಿದ್ದಾರೆ. ನಿರ್ಲಜ್ಜ ಸರಕಾರವೇ ಅಕ್ರಮ ದಂಧೆಗಿಳಿದಿದೆ. ಚುನಾವಣಾ ಪ್ರಣಾಳಿಕೆಯಂತೆ ಲೋಕಾಯುಕ್ತರಿಗೆ ಪರಮಾಕಾರ ನೀಡದ ಪಕ್ಷ, ಜನತೆಯ ಆಶೋತ್ತರಗಳಿಗೆ ಬೆಲೆ ನೀಡುತ್ತಿಲ್ಲ. ಅಧಿಕಾರವಿದ್ದರೂ ಕೂಡ ಬಿಜೆಪಿ ಎಲ್ಲ ರಂಗಗಳಲೂ ವಿಫಲವಾಗಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ