ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದಲ್ಲಿ ವಿದ್ಯುತ್ ಕಡಿತ ಅನಿವಾರ್ಯ: ಜಾಮದಾರ್ (Raichuru | Power cut | Karnataka | KPC | Udupi)
Bookmark and Share Feedback Print
 
ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ ಸರಿದೂಗಿಸುವ ತನಕ ರಾಜ್ಯದಲ್ಲಿ ವಿದ್ಯುತ್ ಕಡಿತ ಅಬಾಧಿತ. ಹಿಂದಿನ ವರ್ಷಗಳಲ್ಲಿ ಹೊಸ ಯೋಜನೆಗಳಿರಲಿಲ್ಲ, ಖರೀದಿಸಲು ವಿದ್ಯುತ್ ಸಿಗದಿರುವುದು ಸಮಸ್ಯೆ ಮೂಲವೆಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.

ನಿಗಮ ಕೈಗೆತ್ತಿಕೊಂಡಿರುವ ಯೋಜನೆಗಳು ಪೂರ್ಣಗೊಳ್ಳಲು 3-4 ವರ್ಷಗಳು ಹಿಡಿಯಲಿದ್ದು, ಮಧ್ಯಂತರ ಅವಧಿ ಶೋಚನೀಯವಾಗಿದೆ. ಜಲ ಮೂಲದ ಉಳಿಕೆ, ಕಲ್ಲಿದ್ದಲು ಲಭ್ಯತೆಗೆ ತಕ್ಕಂತೆ ಉತ್ಪಾದನೆಯಾಗಲಿದ್ದು, ವಿದ್ಯುತ್ ಕಡಿತಕ್ಕೆ ಒಗ್ಗಿಕೊಳ್ಳದೇ ವಿಧಿಯಿಲ್ಲ ಎಂದರು.

ಉಡುಪಿ ಹೊಸ ಘಟಕದಿಂದ 500 ಮೆಗಾ ವ್ಯಾಟ್, ಜುರಾಲಾದಿಂದ 110 ಮೆಗಾ ವ್ಯಾಟ್ ಜಾಲಕ್ಕೆ ಸೇರ್ಪಡೆಯಾಗಲಿದ್ದು, ಜುರಾಲಾ ವಿದ್ಯುತ್ ಪಡೆಯಲು ರಾಜ್ಯ ಸರಕಾರ ಆಂಧ್ರಕ್ಕೆ ಈಗಾಗಲೇ 70 ಕೋಟಿ ರೂ. ಬಿಡುಗಡೆ ಮಾಡಿದೆ.

ಕಳೆದ 19 ವರ್ಷಗಳಲ್ಲಿ 34 ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದನೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಪೈಕಿ ಎರಡು ಜಾರಿಯಾಗಿವೆ. ಖಾಸಗಿ ಸಂಸ್ಥೆಗಳನ್ನು ನಂಬಿದರೆ ಸಮಸ್ಯೆ ಬಿಗಡಾಯಿಸುತ್ತದೆ ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಪ್ರಾಯ ಎಂದು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ರಾಜ್ಯ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಬೇಕಾದ ಯೋಜನೆ ರೂಪಿಸಲು ಕೆಪಿಸಿಗೆ ಸೂಚಿಸಿದರು. ಮುಂದಿನ ನಾಲ್ಕು ವರ್ಷಗಳಲ್ಲಿ 6,000 ಮೆಗಾ ವ್ಯಾಟ್‌ಗೂ ಅಧಿಕ ಸಾಮರ್ಥ್ಯದ 43,000 ಕೋಟಿ ರೂ. ವೆಚ್ಚದ ಯೋಜನೆಗಳು ನಿಗಮದ ಕೈಯಲ್ಲಿವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ