ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ-ತಾಕತ್ತಿದ್ದರೆ ಸಿಬಿಐ ತನಿಖೆ ನಡೆಸಿ: ಪೂಜಾರಿ (Janardana Poojary | CBI | Mangalore | Yeddyurappa | Karnataka)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ನೀಡಲಿ. ಈ ಮೂಲಕ ಸ್ವಪಕ್ಷ ಹಾಗೂ ಪ್ರತಿಪಕ್ಷಗಳ ಬಂಡವಾಳ ಹೊರಗೆ ಬರಲಿ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ಪ್ರತಿಪಕ್ಷದವರೂ ಇದ್ದಾರೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಿಂದ ಪ್ರಕರಣ ಸಿಬಿಐಗೆ ವಹಿಸಲಿ. ಪ್ರತಿ ಪಕ್ಷದವರದ್ದೂ ಹಗರಣ ಹೊರಗೆ ಬರಲಿ. ಆ ನಿಟ್ಟಿನಲ್ಲಾದರೂ ಗಣಿ ಪ್ರಕರಣ ವಿವಾದ ಮುಕ್ತಾಯ ಕಾಣಲಿ ಎಂದರು.

ವಿರೋಧ ಪಕ್ಷಗಳು ಎಷ್ಟೇ ಒತ್ತಾಯ ಮಾಡಿದರೂ ಮುಖ್ಯಮಂತ್ರಿ ಯಾವುದನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಅದಕ್ಕಾಗಿ ಈ ರೀತಿಯ ಅಹೋರಾತ್ರಿ ಧರಣಿ ಅನಿವಾರ್ಯ. ಗಣಿ ಪ್ರಕರಣದಿಂದಾಗಿ ರಾಜ್ಯದಲ್ಲಿ ರಾಜಕೀಯ, ಆಡಳಿತ ಅರಾಜಕತೆ ತಲೆದೋರಿದ್ದು, ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ಬಳಿಕ ಚುನಾವಣೆ ಘೋಷಣೆ ಮಾಡಬೇಕು ಎಂದು ಪೂಜಾರಿ ಒತ್ತಾಯಿಸಿದರು.

ಅಕ್ರಮ ಗಣಿಗಾರಿಕೆಯಿಂದ 25 ಸಾವಿರ ಕೋಟಿ ರೂ.ಗಳಷ್ಟು ಕರ್ನಾಟಕ ಜನತೆಯ ಅಭಿವೃದ್ಧಿ ಹಣ ನಷ್ಟವಾಗಿದೆ. ಇದನ್ನು ನಿಯಂತ್ರಿಸುವ ಶಕ್ತಿ ಮುಖ್ಯಮಂತ್ರಿಗಿಲ್ಲ. ಛತ್ತೀಸ್‌ಗಢದಲ್ಲಿ ನಕ್ಸಲರು ಸಮಾನಾಂತರ ಸರಕಾರದಂತೆ ವರ್ತಿಸುತ್ತಾರೆ. ಹಾಗೆಯೇ ಬಳ್ಳಾರಿಯ ಜನಾರ್ದನ ರೆಡ್ಡಿ ನೇತೃತ್ವದ ಸಮಾನಾಂತರ ಸರಕಾರ ರಾಜ್ಯದಲ್ಲಿದೆ. ಅಲ್ಲಿ ಅವರೇ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ