ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಪಕ್ಷಗಳ ಧರಣಿ ಹಿಂದೆ ಸಿಎಂ ಕೈವಾಡ?: ರೆಡ್ಡಿ ಬ್ರದರ್ಸ್ ಗರಂ (Janardana Reddy | Yeddyurappa | BJP | Congress | Siddaramaiah)
Bookmark and Share Feedback Print
 
NRB
ಅಕ್ರಮ ಗಣಿಗಾರಿಕೆ ಹಗರಣದ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಧರಣಿಯ ಹಿಂದೆ ಮಧ್ಯಂತರ ಚುನಾವಣೆಯ ಕನಸು ಕಾಣುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈವಾಡ ಇದೆ ಎಂಬ ಶಂಕೆ ಇದೀಗ ಗಣಿರೆಡ್ಡಿಗಳನ್ನು ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯರಾಜಕಾರಣದಲ್ಲಿ ಮತ್ತೊಮ್ಮೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗುತ್ತಿದೆ.

ಉನ್ನತ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸೋಮವಾರ ವಿಧಾನಸಭೆಯಲ್ಲಿ ಪ್ರತಿಭಟನೆಗಳಿದಿದ್ದ ಪ್ರತಿಪಕ್ಷಗಳ ನಾಯಕರ ಪೈಕಿ ಒಬ್ಬರಿಗೆ ಮುಖ್ಯಮಂತ್ರಿಗಳು ಶುಭವಾಗಲಿ, ನಿಮ್ಮ ಹೋರಾಟ ಮುಂದುವರಿಯಲಿ ಎಂಬ ಸಂದೇಶವಿರುವ ಪತ್ರವನ್ನು ರವಾನಿಸಿರುವ ಅಂಶವೇ ಗಣಿರೆಡ್ಡಿಗಳ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಸೋಮವಾರ ಮಧ್ಯಾಹ್ನದವರೆಗೂ ಗಣಿರೆಡ್ಡಿ ಪಡೆಯ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದ ಪ್ರತಿಪಕ್ಷಗಳು, ಸಂಜೆ ಏಕಾಏಕಿ ಅಕ್ರಮ ಗಣಿಗಾರಿಕೆ ಹಗರಣವೇ ನಮ್ಮ ಹೋರಾಟದ ಕೇಂದ್ರ ಬಿಂದು. ಈ ಹಿನ್ನೆಲೆಯಲ್ಲಿ ಅದನ್ನು ಸಿಬಿಐಗೆ ಒಪ್ಪಿಸಬೇಕು ಎಂದಿರುವುದು ಗಣಿಧಣಿಗಳು ಯಡಿಯೂರಪ್ಪ ಅವರನ್ನು ಸಂಶಯದಿಂದ ನೋಡಲು ಕಾರಣವಾಗಿದೆ.

ಗಣಿರೆಡ್ಡಿಗಳ ಅನುಮಾನದ ಪ್ರಕಾರ ಯಡಿಯೂರಪ್ಪ ಅವರ ಕುಮ್ಮಕ್ಕಿನ ಪ್ರಕಾರವೇ ಪ್ರತಿಪಕ್ಷಗಳ ಕೆಲವು ನಾಯಕರು ಈ ಹೋರಾಟವನ್ನು ತೀವ್ರಗೊಳಿಸಿದ್ದು, ಹೇಗಾದರೂ ಮಾಡಿ ತಮ್ಮ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವಂತೆ ಮಾಡಬೇಕು. ಪಕ್ಷದಿಂದ ಉಚ್ಚಾಟನೆ ಮಾಡಲು ದಾರಿ ಸಿದ್ದಗೊಳಿಸಬೇಕು ಎಂದು ಯಡಿಯೂರಪ್ಪ ತಂತ್ರ ಹೆಣೆದಿದ್ದಾರೆ ಎಂಬುದು ಗಣಿರೆಡ್ಡಿಗಳ ಸಂಶಯ.

ಆ ರೀತಿ ಮಾಡುವ ಮೂಲಕ ಮಧ್ಯಂತರ ಚುನಾವಣೆಗೆ ಹೋಗಬೇಕು. ಗಣಿರೆಡ್ಡಿಗಳ ದುಡ್ಡಿನ ನೆರವಿಲ್ಲದೆ ಚುನಾವಣೆ ಎದುರಿಸಿ ಸ್ವಯಂ ಸಾಮರ್ಥ್ಯದೊಂದಿಗೆ ಅಧಿಕಾರದ ಗದ್ದುಗೆ ಏರಬೇಕು ಎಂಬ ಲೆಕ್ಕಚಾರ ಯಡಿಯೂರಪ್ಪನವರದ್ದು. ಅದಕ್ಕೆ ಬೇಕಾದ ವಾತಾವರಣ ಸಿದ್ದಪಡಿಸುತ್ತಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಪ್ರತಿಪಕ್ಷಗಳ ನಾಯಕರನ್ನು ನೇರವಾಗಿ ಸಂಪರ್ಕಿಸುವ ಬದಲು ತಮಗೆ ಪರಮಾಪ್ತರಾದ ಇಬ್ಬರು ಸಚಿವರನ್ನು ಮಧ್ಯವರ್ತಿಗಳಾಗಿ ಯಡಿಯೂರಪ್ಪ ಬಳಸಿಕೊಳ್ಳುತ್ತಿದ್ದು, ಅವರ ಮೂಲಕವೇ ಎಲ್ಲ ಸಂದೇಶ ರವಾನೆಯಾಗುತ್ತಿದೆ ಎಂಬ ಮಾಹಿತಿ ರೆಡ್ಡಿಗಳಿಗೆ ಸಿಕ್ಕಿದೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ರಹಸ್ಯ ಚರ್ಚೆ ನಡೆಸಿದ್ದರೆ, ಮತ್ತೊಂದೆಡೆ ರೆಡ್ಡಿ ಬ್ರದರ್ಸ್ ತಮ್ಮ ಪಟಾಲಂ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ