ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿಗಾರಿಕೆ ತಡೆಯದಿದ್ದರೆ ಉಳಿಗಾಲವಿಲ್ಲ: ಶಿವಲಿಂಗೇಗೌಡ (Mining | Government | Protest)
Bookmark and Share Feedback Print
 
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಸರಕಾರ ಈಗಲಾದರೂ ಕಡಿವಾಣ ಹಾಕದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ವಿಷಯದಲ್ಲಿ ಸರಕಾರ ವಿಫಲವಾದರೆ ತಾವು ಸ್ವಯಂಪ್ರೇರಿತವಾಗಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಸಿದ್ದಾರೆ.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ವಿಶೇಷ ಘಟಕ ಯೋಜನೆಯಡಿ ರೈತರಿಗೆ ಉಚಿತ ಕೃಷಿ ಉಪಕರಣಗಳು ಮತ್ತು ಬೀಜ, ಗೊಬ್ಬರ ವಿತರಣೆ ಮಾಡಿ ಮಾತನಾಡಿ, ಸರಕಾರ ಗಣಿಗಾರಿಕೆ ತಡೆಯಲು ವಿಫಲವಾದರೆ ನಾನೇ ಸ್ವಯಂ ಪ್ರೇರಿತರಾಗಿ ಚಳವಳಿ ಹಮ್ಮಿಕೊಳ್ಳುವುದಲ್ಲದೆ, ಅರಸೀಕೆರೆ ಮಾರ್ಗವಾಗಿ ಅದಿರು ಸಾಗಿಸುವ ಲಾರಿಗಳಿಗೆ ತಡೆ ಒಡ್ಡುತ್ತೇನೆ ಹಾಗೂ ಅದಿರು ಸಾಗಣೆಯ ಲಾರಿಗಳ ಟಯರ್ ಕುಯ್ದು ಪ್ರತಿಭಟಿಸುತ್ತೇನೆ. ಈ ಚಳವಳಿಗೆ ರೈತರ ಬೆಂಬಲ ಪಡೆಯುವೆ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ವಿಷಯವನ್ನು ಸಿಬಿಐಗೆ ವಹಿಸುವ ವಿಚಾರಕ್ಕೆ ಸಂಬಂಧಿಸಿ ಸದನದಲ್ಲಿ ರಾಜ್ಯ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಉಂಟಾದ ಸಂಘರ್ಷದ ವಾತಾವರಣದ ಬಗ್ಗೆ ಪ್ರಸ್ತಾಪಿಸಿ, ಗಣಿಗಾರಿಕೆಯಲ್ಲಿ ಎಲ್ಲ ಪಕ್ಷಗಳ ಪಾಲೂ ಇದೆ. ರಾಜ್ಯದ ಹಿತದೃಷ್ಟಿಯಿಂದ ಇನ್ನಾದರೂ ಅಕ್ರಮ ಗಣಿಗಾರಿಕೆಗೆ ಸರಕಾರ ಕಡಿವಾಣ ಹಾಕಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ