ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಗಣಿಧಣಿಗಳು ಆಸ್ತಿ ವಿವರ ಬಹಿರಂಗಪಡಿಸಲಿ: ವಿಶ್ವನಾಥ್ (Congress | Vishwanath | Mysore | illiagal Mining | BJP)
Bookmark and Share Feedback Print
 
ಜನ ಸಾಮಾನ್ಯರಲ್ಲಿರುವ ಗೊಂದಲ ನಿವಾರಣೆಗೆ ಕಾಂಗ್ರೆಸ್‌ನ ಗಣಿ ಉದ್ಯಮಿಗಳೂ ತಮ್ಮ ಆಸ್ತಿ, ಗಣಿ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಲೋಕಸಭಾ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಯಾರೇ ಆಗಲಿ ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ ಅಕ್ರಮವಾಗಿ ವ್ಯವಹಾರ ಮಾಡುವುದು ತಪ್ಪು. ಗಣಿ ಗದ್ದಲದಿಂದಾಗಿ ರಾಜ್ಯದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ಕಾಂಗ್ರೆಸ್ ನಾಯಕರೂ ಗಣಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವೆ. ಇಂಥ ಸಂದರ್ಭದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಲು ನಿಮ್ಮ ಆಸ್ತಿಗಳನ್ನು ಕೂಡಲೇ ಬಹಿರಂಗಪಡಿಸಿ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾಂಗ್ರೆಸ್‌ನ ಘೋರ್ಪಡೆ ಅವರು ಗಣಿ ಮಾಡಿದರೂ ನಷ್ಟ ಅನುಭವಿಸಿದ್ದಾರೆ. ವಿದ್ಯುತ್ ಬಿಲ್ ಕಟ್ಟಲು ಆಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಅಲ್ಲಂ, ಡಿಕೆಶಿ, ವಹಾಬ್, ಘೋರ್ಪಡೆ ಯಾರೇ ಇರಲಿ ಆಸ್ತಿಗಳನ್ನು ಬಹಿರಂಗಪಡಿಸುವುದು ಸೂಕ್ತ ಎಂದರು.

ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ರೆಡ್ಡಿ ಒಂದು ಕಡೆ ಹೇಳುತ್ತಾರೆ. ಮತ್ತೊಂದು ಕಡೆ ನಮ್ಮ ಗಣಿ ಇರುವುದು ಆಂಧ್ರದಲ್ಲಿಯೇ ಹೊರತು ಕರ್ನಾಟಕದಲ್ಲಿ ಅಲ್ಲ ಎನ್ನುತ್ತಾರೆ. ಹೀಗೆ ಗೊಂದಲದ ಹೇಳಿಕೆ ನೀಡುವ ರೆಡ್ಡಿಗೆ, ಲೋಕಾಯುಕ್ತರು ಆಂಧ್ರಪ್ರದೇಶಕ್ಕೆ ಹೋಗಿ ತನಿಖೆ ಮಾಡಲು ಆಗುವುದಿಲ್ಲ ಎನ್ನುವುದು ತಿಳಿಯುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ