ಮಸೂದೆ ಜಾರಿ ಕುರಿತಂತೆ ಕೆಲವು ಸ್ಪಷ್ಟನೆ ನೀಡುವಂತೆ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ದನ, ಕರು, ಎಮ್ಮೆ, ಎತ್ತು ಸೇರಿದಂತೆ ಹಾಲು ಕೊಡುವ ಪ್ರಾಣಿಗಳ ವಧೆ ನಿಷೇಧಿಸುವ ಸಲುವಾಗಿ ಈ ಕಾಯ್ದೆ ತರುತ್ತಿರುವ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಮಸೂದೆ ಕುರಿತಂತೆ ಸುಪ್ರೀನಲ್ಲಿ ನ್ಯಾ.ಆರ್.ಸಿ.ಲಹೋಟಿ ನೇತೃತ್ವದ ನ್ಯಾಯಾಧೀಶರ ಪೀಠ ನೀಡಿರುವ ಆದೇಶದ ಪ್ರತಿ ಒದಗಿಸುವಂತೆ ರಾಜ್ಯಪಾಲರು ಕೇಳಿದ್ದಾರೆ. ಏಳು ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿರುವ ಬಗ್ಗೆ ರಾಜ್ಯಪಾಲರಿಗೆ ವಿವರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಅಲ್ಲದೆ, ಅಕ್ರಮ-ಸಕ್ರಮ ಮಸೂದೆ ಕುರಿತು ಕೋರ್ಟ್ ತಡೆಯಾಜ್ಞೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿರುವ ರಾಜ್ಯಪಾಲರು ಅದರ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ. ಆದರೆ, ತಡೆಯಾಜ್ಞೆ ಇಲ್ಲ ಎಂಬುದು ಖಾತರಿಯಾಗಿದೆ. ಈ ಬಗ್ಗೆಯೂ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.