ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್‌ನ್ನು ಬೇರು ಸಹಿತ ಕಿತ್ತುಹಾಕ್ತೇನೆ: ಸಿಎಂ ಶಪಥ (Congress | BJP | Yeddyurappa | KPCC | Siddaramaiah)
Bookmark and Share Feedback Print
 
NRB
ರಾಜ್ಯದ ಅಭಿವೃದ್ಧಿಯನ್ನು ಸಹಿಸದೆ ಅಕ್ರಮ ಗಣಿಗಾರಿಕೆ ಹೆಸರು ಹೇಳಿಕೊಂಡು ಪಾದಯಾತ್ರೆ ಮಾಡುತ್ತಿದ್ದೀರಾ? ನಿಮಗೆ ನಾಚಿಕೆಯಾಗುವುದಿಲ್ವಾ? ರಾಜ್ಯದಲ್ಲಿ ಅಕ್ರಮ, ಭ್ರಷ್ಟಾಚಾರ ನಡೆಸಿದವರು ನೀವು, ಈಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತೀರಾ? ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಹೀಗೆ ಕಾಂಗ್ರೆಸ್ ವಿರುದ್ಧ ಆವೇಶದಿಂದ ಮಾತನಾಡಿದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ದಾವಣಗೆರೆಯಲ್ಲಿ ಸೋಮವಾರ ನಡೆದ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆಯಾ, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ನಡೆಯುತ್ತಿದೆ. ಹಲವು ದಶಕಗಳಿಂದ ಆಡಳಿತ ನಡೆಸಿದರೂ ಕೂಡ ದೀನದಲಿತರ ಉದ್ದಾರ ಮಾಡಿಲ್ಲ, ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿಲ್ಲ. ಇದೀಗ ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ನಡೆಸುತ್ತಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಡ್ಯಾನ್ಸ್ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದೀರಿ. ನಿಮಗೆ ಮಾನ-ಮರ್ಯಾದೆ ಏನಾದ್ರೂ ಇದೆಯಾ?ನಾನು ಸಾಕಷ್ಟು ಸಲ ಪಾದಯಾತ್ರೆ ಮಾಡಿದ್ದೇನೆ. ಅದು ರಾಮನಾಮ ಜಪಿಸಿಕೊಂಡು. ನಿಮ್ಮ ಹಾಗೆ ಡ್ಯಾನ್ಸ್ ಮಾಡಿ, ಕತ್ತಿ ವರಸೆ ಮಾಡುತ್ತ ಮಾಡಿಲ್ಲ. ವಿಪಕ್ಷದಲ್ಲಿರುವ ನೀವು ಗೌರವಯುತವಾಗಿ ನಡೆದುಕೊಳ್ಳಬೇಕು. ನೀವು ಪಾದಯಾತ್ರೆ ಮುಗಿಸಿ ಬನ್ನಿ, ನಾನು ಕೂಡ ಆ.20ರಿಂದ ರಾಜ್ಯಾದ್ಯಂತ ಪಾದಯಾತ್ರೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಅನ್ನು ಬೇರು ಸಹಿತ ಕಿತ್ತು ಹಾಕ್ತೇನೆ:ತಾವು ಅಧಿಕಾರದಲ್ಲಿದ್ದಾಗ ಸಾಕಷ್ಟು ಲೂಟಿ ಮಾಡಿ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿರುವ ಕಾಂಗ್ರೆಸ್‌ಗೆ ಯಾವ ನೈತಿಕತೆಯೂ ಇಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು. ಪಾದಯಾತ್ರೆಯುದ್ದಕ್ಕೂ ಬಾಯಿಗೆ ಬಂದಂತೆ ಸೊಂಟದ ಕೆಳಗಿನ ಶಬ್ದವನ್ನೇ ಉಪಯೋಗಿಸುತ್ತಿದ್ದೀರಿ. ಇದು ಕಾಂಗ್ರೆಸ್ಸಿಗರಿಗೆ ಶೋಭೆ ತರುವುದಿಲ್ಲ ಎಂದರು.

ನಮಗೆ ರಾಜ್ಯದ ಜನರ ಆಶೀರ್ವಾದ ಇದೆ, ಯಾರಿಂದಲೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ವಿಶ್ವಾಸದ್ರೋಹ, ನಂಬಿಕೆ ದ್ರೋಹ ಬಿಜೆಪಿ ಪಕ್ಷ ಮಾಡಲ್ಲ. ನೋಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆದ್ದು ತೋರಿಸ್ತೇವೆ. ಕಾಂಗ್ರೆಸ್ಸಿಗರ ದೊಂಬರಾಟ ನಿಲ್ಲಿಸಿ. ನಿಮ್ಮ ಕುತಂತ್ರದ ರಾಜಕೀಯವನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಪಾದಯಾತ್ರೆ, ಸಮಾವೇಶ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ತಲೆ ಎತ್ತದಂತೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಶಪಥಗೈದರು.

ಕಾಂಗ್ರೆಸ್ಸಿಗರ ನಡವಳಿಕೆಗೆ ಧಿಕ್ಕಾರ, ಇದು ಕಾಂಗ್ರೆಸ್ ನಡವಳಿಕೆ ವಿರುದ್ಧದ ಆಕ್ರೋಶದ ಮಾತಲ್ಲ. ನನ್ನ ರಕ್ತ ಕುದಿಯುತ್ತಿದೆ. ನಾನು ಯಾರಿಗೂ ಹೆದರುವುದಿಲ್ಲ. ಕಾಂಗ್ರೆಸ್ ಅನ್ನು ಬೇರು ಸಹಿತ ಕಿತ್ತು ಹಾಕುವುದೇ ನನ್ನ ಏಕೈಕ ಗುರಿ ಎಂದು ಕಿಡಿಕಾರಿದರು.

ಡಿಎಸ್ಎಸ್ ಪ್ರತಿಭಟನೆ-ಎಸ್ಪಿಗೆ ತರಾಟೆ:ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಎಸ್ಎಸ್ ಕಾರ್ಯಕರ್ತರು ಯಡಿಯೂರಪ್ಪ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದುದನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಭೆಯಲ್ಲೇ ಡಿಎಸ್ಎಸ್ ಧೋರಣೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ಸ್ಟೇಜ್ ಮೇಲೆ ಕರೆಯಿಸಿ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಸುಮಾರು ಎರಡು ಲಕ್ಷ ಜನ ಭಾಗವಹಿಸಿರುವ ಸಮಾವೇಶದಲ್ಲಿ ನಿಮ್ಮ ಅಹವಾಲು ಕೇಳಲು ಸಾಧ್ಯವಿಲ್ಲ. ನೀವು ಮೊದಲು ಪರಿಸ್ಥಿತಿಯನ್ನು ಗಮನಿಸಬೇಕು. ಹಲವಾರು ದಶಕಗಳಿಂದ ಬಗೆಹರಿಯದ ಸಮಸ್ಯೆ, ಈಗಲೇ ಪರಿಹರಿಸಬೇಕು ಎಂದು ಹೇಗೆ ಎಂದು ಡಿಎಸ್ಎಸ್ ಪ್ರತಿಭಟನೆಯನ್ನು ಖಂಡಿಸಿದರು. ಅಷ್ಟೇ ಅಲ್ಲ, ಯಾರ್ರಿ ಅದು ಎಂದು ಪೊಲೀಸ್ ವರಿಷ್ಠಾಧಿಕಾರಿಯನ್ನೇ ಸ್ಟೇಜ್ ಮೇಲೆ ಕರೆಯಿಸಿಕೊಂಡ ಮುಖ್ಯಮಂತ್ರಿಗಳು, ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಬಾವುಟ ಪ್ರದರ್ಶನ ತಡೆಯದ ಪೊಲೀಸ್ ವರಿಷ್ಠಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಿವೇಶನ ನೀಡುವಂತೆ ಒತ್ತಾಯಿಸಿ ಕಪ್ಪು ಬಾವುಟ ಪ್ರದರ್ಶಿಸಿದ ಡಿಎಸ್ಎಸ್ ಸಂಘಟನೆಯ ಹತ್ತು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಇದು ಸಮಾವೇಶ ಹಾಳು ಮಾಡಲು ಕಾಂಗ್ರೆಸ್ ಪಿತೂರಿ ನಡೆಸಿದೆ ಎಂದು ಸಿಎಂ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ