ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 2015ರೊಳಗೆ ಸಂಪೂರ್ಣ ಸಾಕ್ಷರತೆ: ಯಡ್ಡಿ ಗುರಿ (Karnataka | literacy | Yeddyurappa | Female Literacy)
Bookmark and Share Feedback Print
 
'ಸಾಕ್ಷರ್ ಭಾರತ್' ಯೋಜನೆಯೊಂದಿಗೆ ರಾಜ್ಯವು 2015ರೊಳಗೆ ಸಂಪೂರ್ಣ ಸಾಕ್ಷರತೆ ಪಡೆಯುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಲೋಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಆರಂಭಿಸಿರುವ ಸಾಕ್ಷರ ಭಾರತ್ ಯೋಜನೆಯನ್ನು ಉದ್ಘಾಟಿಸಿ ಮಾತಾನಾಡಿದ ಅವರು 2015ರೊಳಗೆ ಶೇಕಡಾ 85ರಷ್ಟು ಹಾಗೂ 2105ರಲ್ಲಿ ರಾಜ್ಯ ಸಂಪೂರ್ಣ ಸಾಕ್ಷರತೆ ಮುಟ್ಟಲಿದೆ ಎಂದು ಹೇಳಿದರು.

2012 ಮಾರ್ಚ್ 31ರ ವೇಳೆಗೆ ರಾಜ್ಯದ 18 ಜಿಲ್ಲೆಗಳ 37 ಲಕ್ಷ ಅನಕ್ಷರಸ್ಥರನ್ನು ಸಾಕ್ಷರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದವರು ತಿಳಿಸಿದರು. ಯೋಜನೆಯ ವೆಚ್ಚದ ಶೇಕಡಾ 25ರಷ್ಟನ್ನು ರಾಜ್ಯ ಸರಕಾರ ಭರಿಸುತ್ತಿದ್ದು, ಮಿಕ್ಕದನ್ನು ಕೇಂದ್ರ ಸರಕಾರ ಒದಸಲಿವೆ.

15ರಿಂದ 35 ವರ್ಷದವರೊಳಗಿನ ಎಲ್ಲಾ ಮಹಿಳೆಯರು 2012ರ ವೇಳೆಗೆ ಸಾಕ್ಷರತೆಯನ್ನು ಪಡೆಯಲು ಸರಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಇಡೀ ವಿಶ್ವವೇ ಗಮನಿಸುತ್ತಿದ್ದಂತೆಯೇ 21ನೇ ಶತಮಾನ ಭಾರತಕ್ಕೆ ಸೇರಿದಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಸಾಕ್ಷರತಾ ಮಿಷನ್‌ ಜಾರಿಯಾಗಲಿದೆ ಎಂದವರು ಹೇಳಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ