ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿಗೆ ಉಳಿಗಾಲವಿಲ್ಲ-ರೆಡ್ಡಿಗಳನ್ನು ಕಿತ್ತೊಗೆಯಿರಿ: ಸಿದ್ದು (Siddaramaiah | Janardana Reddy | Congress | BJP | KPCC)
Bookmark and Share Feedback Print
 
NRB
'ರೆಡ್ಡಿಗಳು ಕನ್ನಡಿಗರಾದ ನಮಗೆ ಸವಾಲು ಹಾಕ್ತಾರೆ, ನಾವು ಕನ್ನಡಿಗರು, ಇಲ್ಲಿಯೇ ಹುಟ್ಟಿ ಬೆಳೆದವರು, ಆದರೆ ರೆಡ್ಡಿಗಳು ಮೂಲತಃ ಆಂಧ್ರದವರು, ಬಳ್ಳಾರಿಯನ್ನು ಲೂಟಿ ಮಾಡಿ ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ. ಹಾಗಾಗಿ ಬಳ್ಳಾರಿ ಉಳಿಯಬೇಕು ಅಂತಾದ್ರೆ, ಖನಿಜ ಸಂಪತ್ತು ಉಳಿಯಬೇಕು ಅಂತಾದ್ರೆ ಈ ರೆಡ್ಡಿಗಳನ್ನು ರಾಜಕೀಯವಾಗಿ ಬುಡಸಮೇತ ಕಿತ್ತು ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸಿದ 16 ದಿನಗಳ ಬೆಂಗಳೂರು-ಬಳ್ಳಾರಿಯ ನಾಡರಕ್ಷಣೆಗೆ ಕೈ ನಡಿಗೆ ಎಂಬ ಪಾದಯಾತ್ರೆಯ ಬೃಹತ್ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳ್ಳಾರಿ ರಾಜ್ಯದ ಒಂದು ಭಾಗ, ಬಳ್ಳಾರಿ ಬಗ್ಗೆ, ಬಳ್ಳಾರಿ ಜನರ ಬಗ್ಗೆ ನಮಗೆ ಗೌರವವಿದೆ. ಬಳ್ಳಾರಿಯವರಿಗೆ ಒಳ್ಳೆಯ ಸಂಸ್ಕೃತಿ, ಪರಂಪರೆ ಇದೆ. ಆದರೆ ರೆಡ್ಡಿಗಳು ಮೂಲತಃ ಕನ್ನಡಿಗರಲ್ಲ. ರಾಜ್ಯಕ್ಕೆ ದ್ರೋಹ ಮಾಡಿದ ವ್ಯಕ್ತಿಗಳು ಇವರು. ರಾಜ್ಯದ ಗಡಿಭಾಗವನ್ನು ಆಂಧ್ರಕ್ಕೆ ಮಾರಿದ ದ್ರೋಹಿಗಳು ರೆಡ್ಡಿಗಳು. ಇಂತಹ ರೆಡ್ಡಿಗಳು ವಿಧಾನಮಂಡಲದಲ್ಲಿ ಕನ್ನಡಿಗರಾದ ನಮಗೆ ಸವಾಲು ಹಾಕ್ತಾರೆ, ಬಳ್ಳಾರಿಗೆ ಬನ್ನಿ ನೋಡಿಕೊಳ್ತೇವೆ ಎನ್ನುತ್ತಾರೆ. ಇವರೇನು ಬಳ್ಳಾರಿಗೆ ರೌಡಿಗಳಾ? ಬಳ್ಳಾರಿಗೆ ಚಕ್ರವರ್ತಿನಾ? ಎಂದು ಕಿಡಿಕಾರಿದ ಅವರು, ನೂರು ರೆಡ್ಡಿ ಬಂದ್ರೂ ಕೂಡ ನನ್ನ ಅಲ್ಲ ಒಬ್ಬ ಕನ್ನಡಿಗನನ್ನೂ ಮುಗಿಸಲಿಕ್ಕೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ರೆಡ್ಡಿಗಳಿಗೆ ಬಹುವಚನದಲ್ಲಿ ಮಾತನಾಡಿ ಗೊತ್ತೆ ಇಲ್ಲಾ, ಎಲ್ಲರಿಗೂ ಏಕವಚನ ಪ್ರಯೋಗ ಮಾಡುತ್ತಾರೆ. ಇವರಿಗೆ ಸಂಸ್ಕೃತಿಯೇ ಇಲ್ಲ, ರಾಜಕೀಯ ಹಿನ್ನೆಲೆ ಇಲ್ಲ, ರಾಜಕೀಯ ಹೋರಾಟದಿಂದ ಬಂದವರು ಅಲ್ಲ, ಆಕಸ್ಮಿಕವಾಗಿ ರಾಜಕೀಯ ಬಂದ ರೆಡ್ಡಿಗಳು 2003-04ರಲ್ಲಿ ನಿಮ್ಮ ಆಸ್ತಿ ಎಷ್ಟು ಇತ್ತು ಅಂತ ಹೇಳಿ. ಆದರೆ ಈಗ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಪತ್ನಿ ಅರುಣಾ ಜನಾರ್ದನ ರೆಡ್ಡಿ ಹೆಸರಿನಲ್ಲಿ 36 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಕಡಪದಲ್ಲಿ 21ಸಾವಿರ ಕೋಟಿ ರೂಪಾಯಿಗೆ ಬ್ರಹ್ಮಣಿ ಕಂಪನಿ ಹೆಸರಿನಲ್ಲಿ ಹಣ ಹೂಡಿದ್ದಾರೆ. ಇಷ್ಟು ಮೊತ್ತದ ಹಣ ಎಲ್ಲಿಂತ ಬಂತು ರೆಡ್ಡಿಗಳೇ ಎಂದು ಪ್ರಶ್ನಿಸಿದರು.

ಬಳ್ಳಾರಿ ಅಭಿವೃದ್ದಿ ಅಂದ್ರೆ ಇದೇನಾ?: ಬನ್ನಿ ಬಳ್ಳಾರಿಗೆ ಇಲ್ಲಿನ ಅಭಿವೃದ್ದಿ ಕಂಡು ಕಾಂಗ್ರೆಸ್ ನಾಯಕರು ನೇಣು ಹಾಕಿಕೊಳ್ಳಬೇಕು ಅಂತ ರೆಡ್ಡಿ ಸಹೋದರರು ಸವಾಲು ಹಾಕಿದ್ದರು. ದಾರಿಯುದ್ದಕ್ಕೂ ನೋಡುತ್ತಾ ಬಂದಿದ್ದೇನಾ, ಒಂದು ಒಳ್ಳೆಯ ರಸ್ತೆ ಇದೆಯಾ? ಶೌಚಾಲಯ ಇಲ್ಲ, ಬಿಪಿಎಲ್ ಕಾರ್ಡ್ ಇಲ್ಲ, ರೈತರ ವಿರೋಧದ ನಡುವೆಯೇ ಅವರ ಜಮೀನು ಕಿತ್ತುಕೊಂಡು ವಿಮಾನ ನಿಲ್ದಾಣ ಮಾಡುತ್ತಿರುವುದು ಇದೇನಾ ಬಳ್ಳಾರಿ ಅಭಿವೃದ್ದಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಕಾನೂನು ಇದೆಯಾ?: ಹಣ ಮತ್ತು ಅಧಿಕಾರ ಬಲದಿಂದ ಮೆರೆಯುತ್ತಿರುವ ರೆಡ್ಡಿ ಸಹೋದರರಿಂದಾಗಿ ಬಳ್ಳಾರಿಯಲ್ಲಿ ಕಾನೂನು ಎಂಬುದು ಇದೆಯಾ ಎಂದು ಸಿದ್ದು ಗಂಭೀರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಬಂದಾಗಲೂ ಪೊಲೀಸ್ ವರಿಷ್ಠಾಧಿಕಾರಿಯಾಗಲಿ, ಜಿಲ್ಲಾಧಿಕಾರಿಯಾಗಲಿ ಬಂದು ಸ್ವಾಗತಿಸುವುದಿಲ್ಲ. ಯಾಕೆಂದರೆ ಅವರೆಲ್ಲ ರೆಡ್ಡಿಗಳ ಕೈಗೊಂಬೆ. ಆ ಸಂದರ್ಭದಲ್ಲೇ ಸಿಎಂಗೆ ಮಾನ, ಮರ್ಯಾದೆ ಇದ್ದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಆದರೆ ರಾಜ್ಯ ಕಂಡ ಅತ್ಯಂತ ಹೇಡಿ, ಸುಳ್ಳುಗಾರ, ದುರ್ಬಲ ಮುಖ್ಯಮಂತ್ರಿ ಯಾರೆಂದರೆ ಅದು ಯಡಿಯೂರಪ್ಪ ಎಂದು ಲೇವಡಿ ಮಾಡಿದರು.

ನಾನೊಮ್ಮೆ ಸಂಡೂರು ಪ್ರದೇಶಕ್ಕೆ ಭೇಟಿ ನೀಡಲು ಹೋಗುವ ಸಂದರ್ಭದಲ್ಲಿ ಅಲ್ಲಿ ಒಬ್ಬ ಪೇದೆಯೂ ಕೂಡ ನಮ್ಮನ್ನು ಸ್ವಾಗತಿಸಲು ಬಂದಿಲ್ಲ. ಇದೇನಾ ಸ್ವಾಮಿ ಪ್ರಜಾಪ್ರಭುತ್ವ, ನಾನು ಹೋಗುತ್ತಿರುವ ಕಾರಿನ ಮುಂದೆಯೇ ಹತ್ತು ಮಂದಿ ಬೈಕ್‌ನಲ್ಲಿ ರೌಡಿಗಳನ್ನು ಬಿಟ್ಟಿದ್ದರು. ಹೇಳಿ ಬಳ್ಳಾರಿಯಲ್ಲಿ ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

ಹಾಗಾಗಿ ಈ ಬಳ್ಳಾರಿ ಜಿಲ್ಲೆ, ರಾಜ್ಯದ ಖನಿಜ ಸಂಪತ್ತು ಉಳಿಯಬೇಕಾದರೆ, ರೆಡ್ಡಿಗಳ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇಬೇಕು ಎಂದು ಆಗ್ರಹಿಸಿದರು.

ಟಿವಿ ನೋಡಬಾರದು ಅಂತ ಕರೆಂಟ್ ಕಟ್!: ನೋಡಿ ಇವರು ಎಂತಹ ನೀಚ ಜನ ಅಂದ್ರೆ, ಸಿದ್ದರಾಮಯ್ಯನ ಭಾಷಣ ಜನ ನೋಡಬಾರದು ಅಂತ ಬಳ್ಳಾರಿ ನಗರದಾದ್ಯಂತ ಕರೆಂಟ್ ತೆಗೆದಿದ್ದಾರೆ ಎಂದು ಎಂದಿನ ಶೈಲಿಯಲ್ಲೇ ಸಿದ್ದು ಭಾಷಣದ ನಡುವೆಯೇ ವಾಗ್ದಾಳಿ ನಡೆಸಿದರು.

ಬಳ್ಳಾರಿ ನೆಲದಲ್ಲೇ ರೆಡ್ಡಿಗೆ ಸವಾಲ್: ಜನಾರ್ದನ ರೆಡ್ಡಿ ನನಗೆ ಸವಾಲು ಹಾಕಿದ್ದಾರೆ, ಸಿದ್ದರಾಮಯ್ಯನವರೇ ನಾನು ಸೋಮಶೇಖರ ರೆಡ್ಡಿ ಅವರಿಂದ ರಾಜೀನಾಮೆ ಕೊಡಿಸ್ತೇವೆ, ನಿಮಗೆ ತಾಕತ್ತಿದ್ರೆ ಸ್ಪರ್ಧಿಸಿ ಗೆಲ್ಲಿ ಎಂದಿದ್ದಾರೆ. ಆದರೆ ನಾನೀಗ ಇಲ್ಲಿ ನೆರೆದ ಲಕ್ಷಾಂತರ ಜನರ ಸಮ್ಮುಖದಲ್ಲಿ ಹೇಳ್ತಾ ಇದ್ದೇನೆ, ನಿಮಗೆ ತಾಕತ್ತಿದ್ರೆ ವಿಧಾನಸಭೆ ವಿಸರ್ಜಿಸಿ. ನಾನು ಬಳ್ಳಾರಿಯಲ್ಲಿ ನಿಮ್ಮ ಆಶೀರ್ವಾದಿಂದಲೇ ಸ್ಪರ್ಧಿಸುತ್ತೇನೆ. ಅದು ಸೋಮಶೇಖರ ರೆಡ್ಡಿ ವಿರುದ್ಧ ಅಲ್ಲ, ಸ್ವತಃ ಜನಾರ್ದನ ರೆಡ್ಡಿಯೇ ನಿಲ್ಲಲಿ ಎಂದು ಸವಾಲ್ ಹಾಕಿದರು.

ಸಮಾವೇಶದ ಪೂರಕ ಸುದ್ದಿ

ರಾಜ್ಯದಲ್ಲಿ ಮೈನಿಂಗ್ ಲಾಬಿಯ ಹುಟ್ಟಡಗಿಸ್ತೇವೆ-ಮೊಯ್ಲಿ

ಗಣಿ ಸಂಪತ್ತು ಒಂದು ಪಕ್ಷದ ಸ್ವತ್ತಲ್ಲ-ಗುಲಾಂ ನಬಿ ಆಜಾದ
ಸಂಬಂಧಿತ ಮಾಹಿತಿ ಹುಡುಕಿ