ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕಾರಣದ ದಿಕ್ಕು ಬದಲಾಗಿದೆ: ಚನ್ನಯ್ಯ ಸ್ವಾಮೀಜಿ (BJP | Congress | Yeddyurappa | Nijalingappa | Madara Channayya)
Bookmark and Share Feedback Print
 
ರಾಷ್ಟ್ರ ನಾಯಕ ಎಸ್.ನಿಜಲಿಂಗಪ್ಪರ ತತ್ವಾದರ್ಶಗಳು ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಬೇಕು ಎಂದು ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನಗರದ ರಾಷ್ಟ್ರೀಯ ಹೆದ್ದಾರಿ 4ರ ಸೀಬಾರದ ಬಳಿಯ ಎಸ್ಸೆನ್ ಸ್ಮಾರಕ ಆವರಣದಲ್ಲಿ ನಡೆದ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪರ 11ನೇ ಸ್ಮರಣೋತ್ಸವದಲ್ಲಿ ಮಾತನಾಡಿದರು.

ಇಂದಿನ ರಾಜಕಾರಣದ ದಿಕ್ಕು ಬದಲಾಗಿದೆ. ಹಣವಿದ್ದರೆ ಮಾತ್ರ ರಾಜಕಾರಣ ಎಂಬಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವವರಿಗೆ ತತ್ವ, ಸಿದ್ದಾಂತದ ನಡುವೆ ಜೀವ ಸವೆಸಿದ ಎಸ್ಸೆನ್ ಅನುಕರಣೀಯ ಎಂದರು.

ರಾಜಕಾರಣದಲ್ಲಿ ಅರಾಜಕತೆ ಹೆಚ್ಚಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿಜಲಿಂಗಪ್ಪನವರು ಮೂರು ಬಾರಿ ಮುಖ್ಯಮಂತ್ರಿಯಾದರೂ ಅಧಿಕಾರ, ಹಣಕ್ಕೆ ಎಂದಿಗೂ ಆಸೆ ಪಡಲಿಲ್ಲ. ರಾಷ್ಟ್ರಪತಿ ಸ್ಥಾನದ ಅವಕಾಶ ಬಂದಾಗ ಅದರಿಂದ ದೂರವಿದ್ದು ಸ್ವಾಭಿಮಾನ ಮೆರೆದರು ಎಂದು ಸ್ಮರಿಸಿದರು.

ಈ ನಾಡು ಕಂಡ ಅಪರೂಪದ ರಾಜಕಾರಣಿ ನಿಜಲಿಂಗಪ್ಪ. ದಾರ್ಶನಿಕ, ಆದರ್ಶ ವ್ಯಕಿತ್ವದಿಂದ ಸಮಾಜದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟರು. ತಮ್ಮ ಜೀವಿತಾವಯಲ್ಲಿ ಎಂದಿಗೂ ಅಧಿಕಾರ, ಹಣದ ಆಮೀಷಕ್ಕೆ ಸೋಲದ ಎಸ್ಸೆನ್, ಗಾಂಧಿ ತತ್ವದಡಿ ಬದುಕು ಸಾಗಿಸಿದರು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ