ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇವೇಗೌಡರಿಂದ ಸಂವಿಧಾನ ವಿರೋಧಿ ನೀತಿ: ಆಚಾರ್ಯ (HD Deve Gowda | VS Acharya | Karnataka | BJP govt)
Bookmark and Share Feedback Print
 
ಗೋಹತ್ಯೆ ನಿಷೇಧ ಕಾಯಿದೆ ವಿರೋಧಿಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಕಟುವಾಗಿ ಟೀಕಿಸಿದರು.

ಭಯೋತ್ಪಾದನೆಗೆ ಹೆಸರಾದ ಜಮ್ಮು-ಕಾಶ್ಮೀರದಲ್ಲಿ ಗೋಹತ್ಯೆ ಮಾಡಿದರೆ 10 ವರ್ಷ ಜೈಲು ಶಿಕ್ಷೆ ಇದೆ. ಆದರೆ ಈ ಕಾನೂನು ಕರ್ನಾಟಕದಲ್ಲಿ ಜಾರಿಯಾದರೆ ತಪ್ಪೇನು? ಎಲ್ಲದರಲ್ಲೂ ರಾಜಕೀಯ ಬೆರೆಸಬಾರದು ಎಂದು ಕಿವಿಮಾತು ಹೇಳಿದರು.

ಸಂವಿಧಾನದ 48ನೇ ಪರಿಚ್ಛೇದದಲ್ಲಿ ಜಾನುವಾರು ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಸುಪ್ರೀಂ ಕೋರ್ಟ್ ಸಹ ಸಮ್ಮತಿಸಿದೆ. ದೇಶದ ಏಳು ರಾಜ್ಯಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. ಆದರೆ ಗೋಹತ್ಯೆ ನಿಷೇಧ ಕಾಯಿದೆ ಪ್ರಸ್ತಾವನೆ ರಾಷ್ಟ್ತ್ರಪತಿಗಳಿಗೆ ಕಳುಹಿಸಲಾಗಿದ್ದು, ಸಹಿ ಹಾಕಲು ಮೀನಾ-ಮೇಷ ಮಾಡುತ್ತಿದ್ದಾರೆ. ಇದರಲ್ಲೂ ರಾಜಕೀಯ ನಡೆದಿದೆ ಎಂದರು.

ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ದಿಟ್ಟ ನಿಲವು ತೆಗೆದುಕೊಂಡಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಜನಜಾಗೃತಿ ರೂಪಿಸಲಾಗುವುದು ಎಂದೂ ಆಚಾರ್ಯ ಸ್ಪಷ್ಟಪಡಿಸಿದರು.

ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ಶಶೀಲ್ ನಮೋಶಿ ಫಿಟ್ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಬಂದು ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದಾರೆ. ನಮೋಶಿಯವರನ್ನು ತುಂಬಾ ಹತ್ತಿರದಿಂದ ನೋಡಿದ್ದು, ಒಳ್ಳೆಯ ಕೆಲಸಗಾರ, ಸಾಮಾಜಿಕ ಜೀವನದಲ್ಲಿ ಹೆಸರು ಮಾಡಿದ್ದಾರೆ. ಸಾರ್ವಜನಿಕರೊಂದಿಗೆ ವ್ಯಾಪಕ ಸಂಪರ್ಕ ಹೊಂದಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ ಎಂದರು.
ಸಂಬಂಧಿತ ಮಾಹಿತಿ ಹುಡುಕಿ