ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೇಜವಾಬ್ದಾರಿ ನಾಯಕ ಸಿದ್ದರಾಮಯ್ಯಗೆ ಏನಾಗಿದೆ?: ಸಿಎಂ (Siddaramaiah | Yeddyurappa | BJP | Congress | RBI)
Bookmark and Share Feedback Print
 
ರಾಜ್ಯದ ಹಣಕಾಸಿನ ಸ್ಥಿತಿ ಕುರಿತು ಸಿದ್ದರಾಮಯ್ಯ ಅವರು ಬೇಜವಾಬ್ದಾರಿತನದ ಹೇಳಿಕೆ ನೀಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆ ಮನುಷ್ಯ ಉದ್ದೇಶಪೂರ್ವಕವಾಗಿಯೇ ಪ್ರತಿಪಕ್ಷ ನಾಯಕನ ಸ್ಥಾನದ ಜವಾಬ್ದಾರಿ ಮರೆತು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಖಜಾನೆ ಖಾಲಿಯಾಗಿದೆ. ರಾಜ್ಯ ಸಾಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದೆ ಎಂದು ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯದ ಮುಖ್ಯಮಂತ್ರಿಯೂ ನಾನೇ, ಹಣಕಾಸಿನ ಮಂತ್ರಿಯೂ ನಾನೇ, ನಿಮಗೆ ಸಿದ್ದರಾಮಯ್ಯ ಬೇಕೋ ಅಥವಾ ನಾನು ಬೇಕೋ...ಯಾರು ಏನೇ ಹೇಳಲಿ ರಾಜ್ಯದ ಹಣಕಾಸಿನ ಸ್ಥಿತಿಗತಿ ಬಗ್ಗೆ ನಾನು ನೀಡುತ್ತಿರುವ ಹೇಳಿಕೆಯೇ ಅಧಿಕೃತ ಎಂದು ಮಾಧ್ಯಮದವರ ಮೇಲೂ ಹರಿಹಾಯ್ದು ಉತ್ತರಿಸಿದರು.

ವಿಧಾನಮಂಡಲದ ಚರ್ಚೆಯ ವೇಳೆ ಗದ್ದಲ ಎಬ್ಬಿಸಿ ಓಡಿಹೋದವರಿಗೆ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ಏನು ಗೊತ್ತು. ಸ್ವತಃ ಆರ್‌ಬಿಐಯೇ ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಹೊಗಳಿದೆ. ಹಾಗಿದ್ದ ಮೇಲೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಮಾಜಿ ಹಣಕಾಸು ಸಚಿವರು,ಬೇಕಿದ್ದರೆ ನನ್ನ ಅಂಕಿ-ಅಂಶ ಅಧ್ಯಯನ ಮಾಡಲಿ. ನಾನು ಕೊಟ್ಟದ್ದು ಸರಿ ಇಲ್ಲಾಂತ ಹೇಳಲಿ, ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿ ಮಾತನಾಡಲಿ. ರಿಸರ್ವ್ ಬ್ಯಾಂಕ್ ಸಹ ರಾಜ್ಯದ ಆರ್ಥಿಕ ಸ್ಥಿತಿಯನ್ನು ಮುಕ್ತಕಂಠದಿಂದ ಹೊಗಳಿರುವಾಗ ಸಿದ್ದರಾಮಯ್ಯ ಯಾಕೆ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ