ಹುಬ್ಬಳ್ಳಿ, ಸೋಮವಾರ, 27 ಸೆಪ್ಟೆಂಬರ್ 2010( 11:28 IST )
ದಲಿತ ಸಮುದಾಯಕ್ಕೆ ದೀಕ್ಷೆ ಕೊಡಲು ಮುಂದಾಗಿರುವ ಪೇಜಾವರಶ್ರೀಗಳು ಕೇವಲ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಕೊಡುವ ಮೂಲಕ ಕೃಷ್ಣ ಪೂಜೆಗೂ ಅವಕಾಶ ನೀಡಬೇಕು ಎಂದು ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಬಸವಣ್ಣನವರ ಅಮೃತಶಿಲೆ ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಪೇಜಾವರಶ್ರೀಗಳು ದಲಿತರ ಕೇರಿಗಳಿಗೆ ಹೋಗುತ್ತಿರುವುದು ಶ್ಲಾಘನೀಯ ವಿಚಾರ. ಜೊತೆಗೆ ಪೇಜಾವರಶ್ರೀಗಳು ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಕೊಡುತ್ತೇವೆ ಹೊರತು ಕೃಷ್ಣ ಪೂಜೆಗೆ ಅಲ್ಲ ಎಂದು ಹೇಳಿದ್ದಾರೆ.
ನಿಜಕ್ಕೂ ದಲಿತರಿಗೆ ಬೇಕಾಗಿರುವುದು ವೈಷ್ಣವ ದೀಕ್ಷೆಯಲ್ಲ, ಸಮಾತನ ಎಂದ ಅವರು ಮೇಲ್ಜಾತಿಯವರಿಂದ ಅವಮಾನಿತರಾಗುತ್ತಿರುವ, ಬಹಿಷ್ಕಾರಕ್ಕೆ ಒಳಗಾಗುತ್ತಿರುವ ದಲಿತರಿಗೆ ಸಮಾನ ಅವಕಾಶಗಳನ್ನು ಕೊಡಬೇಕು. ಜೊತೆಗೆ ಅಸ್ಪಶ್ರ್ಯತೆ ವಿರುದ್ಧ ಎಲ್ಲ ಮಠಾಧೀಶರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.