ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅ.5ಕ್ಕೆ ರಾಜ್ ಪ್ರತಿಮೆ ಅನಾವರಣ: ಸೋಮಶೇಖರ ರೆಡ್ಡಿ (Somashekar Reddy | Ballary | Raj kumar | Bangalore)
Bookmark and Share Feedback Print
 
ನಗರದ ಡಾ.ರಾಜ್‌ಕುಮಾರ್ ಉದ್ಯಾನದಲ್ಲಿ ಅಕ್ಟೋಬರ್ 5ರಂದು ಕನ್ನಡ ಚಿತ್ರರಂಗದ ಹಿರಿಯ ಚೇತನ ದಿ.ಡಾ.ರಾಜ್‌ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಟುಂಬ ಪಾಲ್ಗೊಳ್ಳಲಿದೆ.

ಈಗಾಗಲೇ ಪಾರ್ವತಮ್ಮ ರಾಜ್‌ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಅಂದು ಸಂಜೆ ನಗರದ ಬಿಡಿಎಎ ಮೈದಾನದಲ್ಲಿ 'ಈ ಸಮಯ ಆನಂದಮಯ' ಎಂಬ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದ್ದು, ಡಾ.ರಾಜ್ ಕುಟುಂಬ ಸದಸ್ಯರು, ಅನೇಕ ಚಿತ್ರಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಇದೇ ವೇಳೆ ಪಾಲಿಕೆಯಿಂದ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸಚಿವ ಜಿ.ಜನಾರ್ದನ ರೆಡ್ಡಿ ಆಶಯದಂತೆ ಪುತ್ಥಳಿ ಅನಾವರಣ ನಡೆಯುತ್ತಿದೆ. ಈಗಾಗಲೇ ನಗರದ ನಗರೂರ್ ನಾರಾಯಣ ರಾವ್ ಪಾರ್ಕ್‌ನಲ್ಲಿ ಕನ್ನಡ ಭುವನೇಶ್ವರಿ ಪುತ್ಥಳಿ ಅನಾವರಣಗೊಳಿಸಿದ್ದಾರೆ. ಅನಂತಪುರ ರಸ್ತೆಗೆ ಡಾ.ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ವಿಶ್ವಶ್ರೇಷ್ಠ ರಂಗಭೂಮಿ ಕಲಾವಿದ ಬಳ್ಳಾರಿ ರಾಘವರ ಪುತ್ಥಳಿ ಅನಾವರಣಗೊಳಿಸಲಾಗಿದೆ. ಕುವೆಂಪು ನಗರದ ಉದ್ಯಾನವನಕ್ಕೆ ದಿ.ವಿಷ್ಣುವರ್ಧನರ ಹೆಸರಿಡಲಾಗುತ್ತಿದ್ದು, ನ.5ರಂದು ವಿಷ್ಣುರವರ ಪತ್ನಿ ಭಾರತಿಯವರಿಂದ ಉದ್ಘಾಟನೆ ಹಾಗೂ ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ