ಬೆಳ್ತಂಗಡಿ, ಬುಧವಾರ, 29 ಸೆಪ್ಟೆಂಬರ್ 2010( 15:22 IST )
ಭಗವಂತ ಮತ್ತು ಧರ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಭಗವಂತನ ಸಮೀಪಕ್ಕೆ ಹೋಗಲು ಇರುವ ನವ ವಿಧಾನಗಳಲ್ಲಿ ಕೀರ್ತನೆ ಹಾಗೂ ಶ್ರುತಿ ಕೂಡ ಮುಖ್ಯ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಅವರು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ತರಬೇತಿ ಸಮಿತಿ ವತಿಯಿಂದ ಆಯೋಜಿಸಲಾಗಿರುವ 12ನೇ ವರ್ಷದ ಭಜನಾ ತರಬೇತಿ ಕಮ್ಮಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರಲ್ಲಿ ಸದ್ಗುಣಗಳನ್ನು ಪ್ರೇರೇಪಿಸುವುದು ಭಜನಾ ಕಮ್ಮಟದ ಮುಖ್ಯ ಉದ್ದೇಶ. ಜನರಲ್ಲಿ ಐಕ್ಯತೆ, ಸಮಭಾವ, ಸಹಬಾಳ್ವೆ ಮೂಡಿಸುವಲ್ಲಿ ಭಜನಾ ಮಂಡಳಿಗಳ ಪಾತ್ರ ದೊಡ್ಡದು ಎಂದು ನುಡಿದರು.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಗಳು ಭಜನಾ ಕಮ್ಮಟದಿಂದ ಆಗುತ್ತಿದೆ. ರಾಜ್ಯದ 23 ತಾಲೂಕಿನ 82 ಭಜನಾ ಮಂಡಳಿಗಳ 30 ಮಹಿಳೆಯರು ಹಾಗೂ 118 ಪುರುಷರು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ಉತ್ತಮ ಕಾರ್ಯ ಎಂದರು.