ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಗುವಿಗೆ ಜನ್ಮ ನೀಡಿದ ನಂತ್ರ ಹಸೆಮಣೆ ಏರಿದ ಜೋಡಿ! (Bhalkhi | Love case | Police | Wedding,)
Bookmark and Share Feedback Print
 
ಪ್ರಿಯಕರನ ವಂಚನೆಯ ನಡುವೆಯೇ ಪ್ರಿಯತಮೆ ಮಗುವಿಗೆ ಜನ್ಮ ನೀಡಿದ ದಿನವೇ ಆತನೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದ್ದಾಳೆ. ಅದೂ ಜಯ ಕರ್ನಾಟಕ ಸಂಘಟನೆಯ ಪ್ರಯತ್ನದ ಫಲವಾಗಿ ಬುಧವಾರ ಈ ಪ್ರೇಮಿಗಳಿಗೆ ಮದುವೆ ಯೋಗ ಕೂಡಿ ಬಂದಿದೆ.

ಮನೆಯವರ ಒಪ್ಪಿಗೆ ಇಲ್ಲವೆಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ ಯುವಕನನ್ನು ಜಯ ಕರ್ನಾಟಕ ಸಂಘಟನೆ ಮುಖಂಡರು ಆತನೊಂದಿಗೆ ಮಾತುಕತೆ ನಡೆಸಿ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸಿದ್ದಾರೆ. ನಂತರ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದಾರೆ. ಅಂತೂ ಗಂಡು ಮಗುವಿನ ಜನನದ ದಿನದಂದೇ ಪಟ್ಟಣದ ಚೌಡಿಗಲ್ಲಿಯ ಅಭಿಷೇಕ್ ತೆಲಂಗ್ ಹಾಗೂ ಜ್ಯೋತಿ ಚಿಂಚೋಳೆ ನವದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

ಬಹು ದಿನದಿಂದ ಇವರಿಬ್ಬರ ಮಧ್ಯೆ ಪ್ರೇಮ ನಡೆದಿತ್ತು. ಆದರೆ ಯುವಕ ಮದುವೆಗೆ ಒಪ್ಪದಿದ್ದಾಗ, ಯುವತಿ ತಾಯಿ ಪೊಲೀಸ್ ಠಾಣೆ ಮೊರೆ ಹೋಗಿದ್ದರು. ಸಿಪಿಐ ಜಾಗರಕಲ್ ಹಾಗೂ ಜಯ ಕರ್ನಾಟಕ ಜಿಲ್ಲಾ ಪ್ರಧಾನ ಸಂಚಾಲಕ ಕಿರಣ ಖಂಡ್ರೆ ನೇತೃತ್ವದಲ್ಲಿ ಯುವಕನ ಮನವೊಲಿಸಿ ಮದುವೆ ನೆರವೇರಿಸಿದ್ದಾರೆ. ಮದುವೆಯ ಎಲ್ಲ ಸಾಮಗ್ರಿಯೊಂದಿಗೆ ಜಯ ಕರ್ನಾಟಕ ಮುಖಂಡರು 5000 ರೂ. ವೈಯಕ್ತಿಕ ಸಹಾಯಧನ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ