ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಂತಕ ಪಡೆ: ದಂಡುಪಾಳ್ಯ ಗ್ಯಾಂಗ್‌ನ 11 ಮಂದಿಗೆ ಗಲ್ಲುಶಿಕ್ಷೆ (Dandupalya | Bangalore | Special court, Murder | capital punishment)
'ಆರೋಪಿಗಳು ಎಸಗಿರುವ ಕೃತ್ಯ ಅತಿ ಅಮಾನವೀಯವಾದದ್ದು. ಇಂತಹ ಪ್ರಕರಣ ಹಿಂದೆ ನಡೆದಿರಲಿಲ್ಲ. ಈ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ನಡೆದ ಕೆಲವು ಪ್ರಕರಣ ಗಮನಿಸಿದರೆ ಆರೋಪಿಗಳು ಕ್ರೂರವಾದ ರೀತಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿದೆ. ಆದ್ದರಿಂದ ಈ ಹಂತಕರಿಗೆ ಮರಣದಂಡನೆಯೇ ಸೂಕ್ತ' ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಮರಣದಂಡನೆಗೆ ಗುರಿಯಾಗಿರುವ ಆರೋಪಿಗಳು ದರೋಡೆ, ಅತ್ಯಾಚಾರ, ಕೊಲೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದರು. 2000ನೇ ಇಸವಿ ವೇಳೆ ದಂಡುಪಾಳ್ಯ ಗ್ಯಾಂಗ್ ಇಡೀ ಉದ್ಯಾನನಗರಿಯನ್ನೇ ಬೆಚ್ಚಿಬೀಳಿಸಿತ್ತು. ಅಮಾಯಕ ಜನರ ಕುತ್ತಿಗೆ ಸೀಳಿ ಈ ಗ್ಯಾಂಗ್ ಹತ್ಯೆ ನಡೆಸುತ್ತಿತ್ತು.
ಉದ್ಯಾನನಗರಿಯ ಜನರನ್ನು ಭೀತಿಗೆ ದೂಡಿದ್ದ ಕೊಲೆ ಪ್ರಕರಣಗಳನ್ನು ದಾಖಲಿಸಿಕೊಂಡ ಅಂದಿನ ಜಂಟಿ ಪೊಲೀಸ್ ಆಯುಕ್ತ ಸುರೇಶ್ ಬಾಬು ಹಾಗೂ ತನಿಖಾಧಿಕಾರಿ ಛಲಪತಿ 1999-2000ದಲ್ಲಿ ಆರೋಪಿಗಳನ್ನು ಸೆರೆ ಹಿಡಿದು ಜೈಲಿಗೆ ತಳ್ಳಿದ್ದರು.