ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನವೆಂಬರ್‌ನಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ: ಸವದಿ (Laxaman savadi | sahakara sapthaha | Congress)
Bookmark and Share Feedback Print
 
ನವೆಂಬರ್ 4ರಿಂದ 20ರವರೆಗೆ 57 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 'ಹವಾಮಾನ ವೈಪರೀತ್ಯ ಬದಲಾವಣೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ' ಪ್ರಸಕ್ತ ಸಾಲಿನ ಅಖಿಲ ಭಾರತ ಸಹಕಾರ ಸಪ್ತಾಹದ ಧ್ಯೇಯವಾಗಿದೆ ಎಂದರು.

ನ. 14ರಂದು ಬೆಂಗಳೂರಿನಲ್ಲಿ ಸಹಕಾರ ಸಪ್ತಾಹವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ದೃಶ್ಯ ಮಾಧ್ಯಮಗಳಲ್ಲಿ ಪರಿಸರ ಸಂರಕ್ಷಣೆ, ವಾಯುಮಾಲಿನ್ಯವನ್ನು ಯಾವ ರೀತಿ ತಡೆಗಟ್ಟಬಹುದು, ಹವಾಮಾನ ಬದಲಾವಣೆಯಲ್ಲಿ ಸಹಕಾರ ಸಂಘಗಳ ಪಾತ್ರ ಏನು ಎಂಬ ಬಗ್ಗೆ ಪ್ರಚಾರ ಮಾಡುವುದರ ಜತೆಗೆ, ಪರಿಣಿತರಿಂದ ಚರ್ಚೆ ಏರ್ಪಡಿಸಿ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ನ. 15 ರಂದು ಕೊಪ್ಪಳದಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ವೃತ್ತಿಪರತೆಗಾಗಿ ಸಾಮರ್ಥ್ಯ ನಿರ್ಮಾಣ, ನ. 16 ರಂದು ಕೊಪ್ಪಳದಲ್ಲಿ ಸಹಕಾರಿ ಹೆಸರನ್ನು ಒಂದು ಚಿಹ್ನೆಯಾಗಿ ಗುರುತಿಸಲು ಪ್ರಯತ್ನಿಸುವುದು, ನ. 17 ರಂದು ಬೆಂಗಳೂರಿನಲ್ಲಿ ಸಹಕಾರಿ ನಾಯಕತ್ವ, ಉತ್ತಮ ಆಡಳಿತ ಮತ್ತು ಪ್ರಜಾಪ್ರಭುತ್ವ, ನ. 18 ರಂದು ತುಮಕೂರಿನಲ್ಲಿ ಮಹಿಳೆ-ಯುವಜನ ಮತ್ತು ದುರ್ಬಲ ವರ್ಗದವರ ನಡುವೆ ಸಹಕಾರ ಅಭಿವೃದ್ದಿ ಮಾದರಿ ಜನಪ್ರಿಯಗೊಳಿಸುವುದು, ನ. 19 ರಂದು ಚಿಕ್ಕಮಗಳೂರಿನಲ್ಲಿ ಕ್ಷೇತ್ರವಾರು ಸಹಕಾರಿಗಳ ಆತ್ಮಾವಲೋಕನ ಮತ್ತು ಮುಂದಾಲೋಚನೆ ಕುರಿತಂತೆ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ನ. 20 ರಂದು ಮೈಸೂರಿನಲ್ಲಿ ಸಹಕಾರ ಸಪ್ತಾಹ ಮುಕ್ತಾಯ ಸಮಾರಂಭ ನಡೆಯುತ್ತದೆ. ನಂತರ ಆಹಾರ ಭದ್ರತೆಗಾಗಿ ಸಹಕಾರಿಗಳ ಪಾತ್ರ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ