ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸತ್ಯಕ್ಕೆ ಜಯ; ಹೈಕೋರ್ಟ್ ತೀರ್ಪಿಗೆ ಯಡಿಯೂರಪ್ಪ ಹರ್ಷ (High court | BJP | Yeddyurappa | Congress | JDS)
Bookmark and Share Feedback Print
 
ಬಿಜೆಪಿಯ 11 ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ.ವಿ.ಜಿ.ಸಭಾಹಿತ್ ಅವರ ಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಹೈಕೋರ್ಟ್ ತೀರ್ಪು ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡುವವರಿಗೆ ಇದು ದೊಡ್ಡ ಪಾಠವಾಗಿದೆ. ಅಷ್ಟೇ ಅಲ್ಲ ಈ ತೀರ್ಪಿನಿಂದ ದೇಶದ ರಾಜಕೀಯ ವ್ಯವಸ್ಥೆ ಬಲಪಡಿಸುವುದಕ್ಕೆ ಸಿಕ್ಕ ಜಯವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವವರಿಗೆ ನ್ಯಾಯಾಲಯದ ತೀರ್ಪು ತಕ್ಕ ಪಾಠವಾಗಿದೆ. ನಿಜಕ್ಕೂ ನ್ಯಾಯಾಲಯದ ತೀರ್ಪು ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂದರು. ಪ್ರತಿಪಕ್ಷಗಳ ನಡವಳಿಕೆ ಬಗ್ಗೆ ಈ ಸಂದರ್ಭದಲ್ಲಿ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, ಪ್ರತಿಪಕ್ಷಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

11 ಶಾಸಕರ ಅನರ್ಹತೆ-ಸ್ಪೀಕರ್ ಆದೇಶಕ್ಕೆ ಹೈಕೋರ್ಟ್ ಅಸ್ತು
[ ವೆಬ್‌ದುನಿಯಾದ ಎಲ್ಲ ಕಾಮೆಂಟಿಗರಲ್ಲಿ ಮನವಿ: ಅಶ್ಲೀಲ, ಅಸಭ್ಯ, ಹೊಲಸು ಪದಗಳು ಬೇಡವೇ ಬೇಡ. ಅದರೊಂದಿಗೆ ಕಾಪಿ ಪೇಸ್ಟ್ ಮಾಡುವ ಕೆಟ್ಟ ಚಾಳಿಯೂ ಬೇಡ. ತಮ್ಮ ಹೆಸರು ಬರೆಯುವ ಧೈರ್ಯವಿಲ್ಲದೆ ಬೇರೆಯವರ ಹೆಸರಲ್ಲಿ ಕೊಳಕು ಬರೆಯುವುದೂ ಬೇಡ. ಇಂಥದ್ದು ಕಂಡರೆ, ಓದುಗರು ದಯವಿಟ್ಟು ಕೂಡಲೇ ರಿಪೋರ್ಟ್ ಅಬ್ಯೂಸ್ ದಯವಿಟ್ಟು ಚರ್ಚೆಗೆ ಈ ವೇದಿಕೆಯನ್ನು ಬಳಸಿಕೊಳ್ಳಿ. ]
ಸಂಬಂಧಿತ ಮಾಹಿತಿ ಹುಡುಕಿ