ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದು ಯಾಕೆ?: ರೇಣುಕಾಚಾರ್ಯ (Renukacharya | BJP | Chikka magalore | Yeddyurappa)
Bookmark and Share Feedback Print
 
'ಸರಕಾರ ವಹಿಸಿದ್ದ ಕೆಲಸವನ್ನು ನಾನು ಮಾಡಿದ್ದೇನೆ. ಆದರೆ ನನ್ನ ವಿರುದ್ಧ ಯಾಕೆ ಪ್ರತಿಭಟನೆ ಮಾಡಿದರೋ ಗೊತ್ತಿಲ್ಲ. ಏಕೆಂದು ಅವರನ್ನೇ ಬೇಕಾದರೆ ಕೇಳಿ'...ಇದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ನೀಡಿದ ಹೇಳಿಕೆ.

ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಅವರು ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲು ಮುಂದಾದ ಸಂದರ್ಭದಲ್ಲಿ ತಮ್ಮ ವಿರುದ್ಧ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಅವರು ನೀಡಿದ ಪ್ರತಿಕ್ರಿಯೆ ಇದು.

ನಾನು ಭಿನ್ನಮತೀಯ ಶಾಸಕರ ಜೊತೆ ಸರಕಾರದ ಪರವಾಗಿ ಮಾತನಾಡಲು ಹೋಗಿದ್ದು. ಕೊನೆಗೆ ನಮ್ಮ ಮಾತಿಗೆ ಮನ್ನಣೆ ಸಿಗದಿದ್ದಾಗ ವಾಪಸ್ ಬಂದಿದ್ದೇನೆಯೇ ವಿನಃ ಇದರಲ್ಲಿ ನನ್ನ ಸಂಚು ಇಲ್ಲ. ಹೀಗಿರುವಾಗ ನನ್ನ ವಿರುದ್ಧ ಪ್ರತಿಭಟನೆ ಮಾಡುವ ಅಗತ್ಯ ಆದರೂ ಏನಿತ್ತು. ಇದು ಅನಗತ್ಯವಾಗಿ ನನ್ನ ವಿರುದ್ಧ ನಡೆದ ಪ್ರತಿಭಟನೆ ಎಂದು ಅವರು ತಿಳಿಸಿದರು.

ಆದರೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಭ್ರಷ್ಟ ರೇಣುಕಾಚಾರ್ಯ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರ ಹಾಗೂ ನಾಡ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೇಣುಕಾಚಾರ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು. ಘಟನೆಯಿಂದ ಸಚಿವರು ವಿಚಲಿತರಾದಂತೆ ಕಂಡು ಬಂದರು. ಆದರೂ ಸಾವರಿಸಿಕೊಂಡು ಧ್ವಜ ವಂದನೆ ಸ್ವೀಕರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ