ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸುಂದರಿ ಹಂತಕಿಗೆ ಜೀವಾವಧಿ ಶಿಕ್ಷೆ ಖಾಯಂ: ಹೈಕೋರ್ಟ್ (High Court | Police | Murder | Bangalore | Karnataka | Shubha)
Bookmark and Share Feedback Print
 
PR
ಪ್ರಿಯಕರನ ಜತೆಗೂಡಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಭಾವಿ ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಶುಭಾ ಶಂಕರನಾರಾಯಣ ಸೇರಿದಂತೆ ನಾಲ್ವರಿಗೆ ನಗರದ 17ನೇ ತ್ವರಿತಗತಿ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿಯುವ ಮೂಲಕ ಶಿಕ್ಷೆಯನ್ನು ಖಾಯಂಗೊಳಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕೊಲೆ ಪ್ರಕರಣ ಕುರಿತಂತೆ 17ನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಒಂಟಿಗೋಡಿ ಅವರು, ಶುಭಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಅಲ್ಲದೇ ಒಂದನೇ ಆರೋಪಿ ಅರುಣ ವರ್ಮಾಗೆ 50 ಸಾವಿರ ರೂ.ದಂಡ, ವೆಂಕಟೇಶ್‌ಗೆ ಒಂದು ಲಕ್ಷ ರೂ. ದಿನೇಶ್‌ಗೆ 50 ಸಾವಿರ ಹಾಗೂ ನಾಲ್ಕನೇ ಆರೋಪಿ ಶುಭಾಗೆ 75 ಸಾವಿರ ರೂ.ದಂಡ ವಿಧಿಸಿದ್ದರು.

ಆದರೆ 17ನೇ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಶುಭಾ ಸೇರಿದಂತೆ ನಾಲ್ವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಎಂ.ಎಸ್.ಪಚ್ಚಾಪುರೆ, ಎನ್.ಆನಂದ್ ಅವರನ್ನೊಳಗೊಂಡ ಪೀಠ, ಶುಭಾ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿ,ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪು ನೀಡಿದರು.

2003ರ ನವೆಂಬರ್ 30ರಂದು ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಗಿರೀಶ್ ಅವರ ಜೊತೆ ಶುಭಾ ವಿವಾಹ ನಿಶ್ಚಯವಾಗಿತ್ತು. ಏತನ್ಮಧ್ಯೆ ಶುಭಾ ತನ್ನದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ಅರುಣ್ ವರ್ಮಾ ಎಂಬಾತನ ಜೊತೆ ಪ್ರೇಮಾಂಕುರವಾಗಿತ್ತು.ಆದರೆ ಸುಂದರಿ ಹಂತಕಿ ವಿವಾಹ ನಿಶ್ಚಯವಾಗುವವರೆಗೂ ಬಾಯಿ ಬಿಡದೆ ಈಕೆ ಭಾವಿ ಪತಿಯ ಕೊಲೆ ಸಂಚು ರೂಪಿಸಿದ್ದಳು.

ಅದಕ್ಕೆ ಪೂರ್ಣ ಪ್ರಮಾಣದ ತಯಾರಿ ನಡೆಸಿಕೊಂಡಿದ್ದ ಶುಭಾ ಡಿಸೆಂಬರ್ 3ರಂದು ನಗರದ ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಹೋಟೆಲ್‌ವೊಂದಕ್ಕೆ ಗಿರೀಶ್ ಜೊತೆ ಬೈಕ್‌ನಲ್ಲಿ ಊಟಕ್ಕೆ ಹೋಗಿದ್ದ ಶುಭಾ, ಊಟ ಮುಗಿಸಿ ಮನೆಗೆ ವಾಪಸಾಗುವ ವೇಳೆ ಇಂದಿರಾನಗರ-ಕೋರಮಂಗಲ ರಸ್ತೆ ಸಮೀಪ ವಿಮಾನ ಇಳಿಯುವ ಮತ್ತು ಹಾರುವ ದೃಶ್ಯ ನೋಡಬೇಕೆಂದು ತಿಳಿಸಿದ್ದಳು. ಇದನ್ನು ನಂಬಿದ ಗಿರೀಶ್ ಬೈಕ್ ನಿಲ್ಲಿಸಿದ್ದ. ತನ್ನ ಯೋಜನೆಯಂತೆ ಮೊದಲೇ ಸಂಚು ರೂಪಿಸಿದಂತೆ ಪ್ರಿಯಕರ ಅರುಣ್ ವರ್ಮಾ ಹಾಗೂ ಇತರರು ಗಿರೀಶ್ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡಿದಿದ್ದರು. ನಂತರ ಗಿರೀಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಪ್ರಕರಣದ ಬಗ್ಗೆ ವಿವೇಕನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 2004ರ ಜನವರಿ 28ರಂದು ಶುಭಾ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸುಂದರಿ ಹಂತಕಿಗೆ ಹೈಕೋರ್ಟ್‌ನಲ್ಲೂ ಜೀವಾವಧಿ ಶಿಕ್ಷೆ ಖಾಯಂ ಆಗಿದ್ದು, ತಾನು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ