ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮನು ಸಿದ್ದಾಂತದ ಬಿಜೆಪಿ ಗ್ರಾಮೀಣಾಭಿವೃದ್ಧಿ ವಿರೋಧಿ: ಪಾಟೀಲ್ (HK Patil | BJP | Congress | JDS | Election)
Bookmark and Share Feedback Print
 
ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ಕಲ್ಪಿಸದಿರುವಂತೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿರುವ ರಾಮಾಜೋಯಿಸ್‌ರಂತಹ ಗ್ರಾಮೀಣಾಭಿವೃದ್ಧಿ ವಿರೋಧಿಗಳನ್ನು ಹೊಂದಿರುವ ಬಿಜೆಪಿಗೆ ಪಂಚಾಯಿತಿ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ 73, 74ನೇ ವಿಧಿಗಳಿಗೆ ತಿದ್ದುಪಡಿ ತರುವ ಮೂಲಕ ಹಿಂದುಳಿದ, ದಲಿತ ಮತ್ತು ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಕಾಂಗ್ರೆಸ್ ನೀಡಿದೆ ಎಂದರು.

ಇದೊಂದು ರಕ್ತರಹಿತ ಸಾಮಾಜಿಕ, ರಾಜಕೀಯ ಕ್ರಾಂತಿ. ಬಿಜೆಪಿ ಮತ್ತು ಜೆಡಿಎಸ್ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ನೀಡಲು ಕಾಂಗ್ರೆಸ್‌ಗೆ ಅಡ್ಡಿಯಾಗುತ್ತಲೇ ಇವೆ. ಮನು ಸಂಸ್ಕೃತಿಯಲ್ಲೇ ಇರುವ ಬಿಜೆಪಿ ಸ್ಥಳೀಯ ಸಂಸ್ಥೆಗಳ ಸ್ವಾಯತ್ತತೆ ಕಸಿಯುವ ಎಲ್ಲ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು.

ಶಾಸಕರಿಗೆ ಎಲ್ಲ ಅಧಿಕಾರ ನೀಡಿ ಪಂಚಾಯತ್ ರಾಜ್ ವ್ಯವಸ್ಥೆ ಸಡಿಲಗೊಳಿಸುವ ಎಲ್ಲ ಯತ್ನಗಳು ಬಿಜೆಪಿಯಿಂದ ನಡೆದಿವೆ. ಜಿ.ಪಂ. ಅಧೀನಕ್ಕೆ 29 ಇಲಾಖೆಗಳನ್ನು ಒಳಪಡಿಸುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಅಂಶ ಜಾರಿಯಾಗುತ್ತದೆ. ಧರಂಸಿಂಗ್, ಎಸ್.ಎಂ.ಕೃಷ್ಣ ಮತ್ತು ಡಿ.ಆರ್.ಪಾಟೀಲ್ ಪ್ರಯತ್ನದಿಂದ ಈಗಾಗಲೇ ಜಿ.ಪಂ.ಗೆ ಹೆಚ್ಚಿನ ಅಧಿಕಾರ ದೊರೆತಿದೆ ಎಂದರು.

ಹರಕು ಸೀರೆ, ಮುರುಕು ಸೈಕಲ್ ವಿತರಣೆಯೇ ಬಿಜೆಪಿ ಸಾಧನೆ. ಇಂತಹ ದೊಂಬರಾಟಗಳನ್ನು ಬಿಜೆಪಿ ಬಿಡಬೇಕು. ಬಿಜೆಪಿ ಸರಕಾರದಲ್ಲಿನ ಭ್ರಷ್ಟಾಚಾರ ಮತ್ತು ನಾನಾ ಹಗರಣಗಳ ಪಟ್ಟಿ ಸಚಿನ್ ತೆಂಡೂಲ್ಕರ್ ರನ್ ರೇಟ್‌ನಂತೆ ಏರುತ್ತಿದೆ. ಹಾಲಪ್ಪ, ರೇಣುಕಾಚಾರ್ಯ, ಸಂಪಂಗಿ ಈ ಸರಕಾರದ ಪ್ರಾತಃಸ್ಮರಣೀಯರು ಎಂದು ವ್ಯಂಗ್ಯವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ