ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರಕಾರ ಪ್ರಾಯೋಜಿತ ಬಂದ್: ಗೌಡರ ಕಿಡಿ (Devegowda | Yadyurappa | Karnataka | Governor)
Bookmark and Share Feedback Print
 
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ ಭಾರಧ್ವಾಜ್ ವಕೀಲರಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ಬಿಜೆಪಿ ಪಕ್ಷವು ರಾಜ್ಯವ್ಯಾಪಕವಾಗಿ ಶನಿವಾರ ಬಂದ್‌ಗೆ ಕರೆ ನೀಡಿತ್ತು. ಆದರೆ ಇದು ಸರಕಾರ ಪ್ರಾಯೋಜಿತ್ ಬಂದ್ ಆಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ತೀವ್ರ ಟೀಕೆ ನಡೆಸಿದ್ದಾರೆ.

ಇದು ಸ್ವಯಂಪ್ರೇರಿತ ಬಂದ್ ಹೇಳಲಾಗುತ್ತಿದೆ. ಆದರೆ ಸರಕಾರ ಪ್ರಾಯೋಜಿತ ಬಂದ್ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಬಂದ್‌ನಿಂದಾಗಿ ಆಗಿರುವ ಅನಾಹುತ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಉಂಟಾಗಿರುವ ನಷ್ಟಕ್ಕೆ ಸರಕಾರವೇ ನೇರ ಹೊಣೆ ವಹಿಸಬೇಕು ಎಂದವರು ಹೇಳಿದರು.

ಬಂದ್‌ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಚಾರ ವ್ಯವಸ್ಥೆಗೆ ತೊಂದರೆಯುಂಟಾಗಿತ್ತು. ಸಾರಿಗೆ ಬಸ್‌ಗಳಿಗೆ ಬೆಂಕಿ ಹಚ್ಚಿರುವುದು, ಅಂಗಡಿಗಳನ್ನು ಲೂಟಿ ಮಾಡಿರುವುದು ತೀವ್ರ ಖಂಡನೀಯ ವಿಚಾರ ಎಂದವರು ತಿಳಿಸಿದರು.

ನಾವು ಆಡಳಿತರೂಢ ಬಿಜೆಪಿ ನೀಡಿರುವ ಬಂದ್ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಿದ್ದೇವೆ. ಯಾಕೆಂದರೆ ಬಂದ್‌ಗೆ ಕರೆ ನೀಡಬಾರದು ಎಂಬ ಸುಪ್ರೀ ಕೋರ್ಟ್ ತೀರ್ಪಿದೆ. ಇದನ್ನು ಉಲ್ಲಂಘಿಸಲಾಗಿದೆ ಎಂದು ಗೌಡರು ತಿಳಿಸಿದರು.

ಅದೇ ಹೊತ್ತಿಗೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲ ಭಾರದ್ವಾಜ್ ಕ್ರಮವನ್ನು ಗೌಡರು ಸಮರ್ಥಿಸಿಕೊಂಡರು. ರಾಜ್ಯಪಾಲರು ಕಾನೂನು ಚೌಕಟ್ಟಿನೊಳಗೆ ನಿರ್ಧಾರ ಕೈಗೊಂಡಿದ್ದಾರೆ ಎಂದವರು ತಿಳಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ