ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಆಸ್ತಿ; ಗೌಡರ ಕುಟುಂಬದ ವಿರುದ್ಧ ದೂರು ದಾಖಲು (Deve gowda | BJP | Kumaraswamy | Yeddyurappa | Land Scam)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂ ಹಗರಣದ ಆರೋಪ ಮಾಡುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಸದಸ್ಯರ ವಿರುದ್ಧ ವಕೀಲರೊಬ್ಬರು ವಿಶೇಷ ನ್ಯಾಯಾಲಯದಲ್ಲಿ ಭೂ ಅಕ್ರಮ, ಅಕ್ರಮ ಅದಿರು ಸಾಗಣೆಗೆ ಅವಕಾಶ ಸೇರಿದಂತೆ ಹಲವು ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ.

ವಕೀಲ ವಿನೋದ್ ಕುಮಾರ್ ಅವರು ಗೌಡರು ಮತ್ತು ಕುಟುಂಬದ ವಿರುದ್ಧ ಐಪಿಸಿ 405, 406, 420, 463, 465, 468, 471, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 13(1)ಡಿ, 13(1)ಡಿ, 13(1)ಇ, 13(2) ಹಾಗೂ ಕರ್ನಾಟಕ ಭೂ (ನಿರ್ಬಂಧ ಮತ್ತು ವರ್ಗಾವಣೆ) ಕಾಯ್ದೆಯ ನಿಯಮ 2 ಮತ್ತು 4ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ದೇವೇಗೌಡ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಎಚ್.ಡಿ.ಬಾಲಕೃಷ್ಣೇಗೌಡ, ಎಚ್.ಕವಿತಾ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಲಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಅವರ ಮುಂದೆ ಈ ದೂರು ದಾಖಲಿಸಲಾಗಿದ್ದು, ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿದ್ದಾರೆ.

ಜಂತಕಲ್ ಎಂಟರ್‌ಪ್ರೈಸಸ್‌ಗೆ ಅಕ್ರಮವಾಗಿ ಅದಿರು ಸಾಗಣೆ ಮಾಡಲು ಅನುಮತಿ ನೀಡಿರುವುದು, ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವುದು. ಇದರಲ್ಲಿ 14 ಸಾವಿರ ಚದರ ಅಡಿ ಸ್ಥಳವನ್ನು ಅನಿತಾ ಕುಮಾರಸ್ವಾಮಿ ಪಡೆದು ನಂತರ ವಾಸ್ತು ಸರಿ ಇಲ್ಲ ಎಂಬ ಕಾರಣಕ್ಕೆ ವಾಪಸ್ ಮಾಡಿರುವುದು, ಮೈಸೂರಿನಲ್ಲಿ ಕುಟುಂಬ ಸದಸ್ಯರಿಗೆ ಅಕ್ರಮವಾಗಿ ನಿವೇಶನಗಳನ್ನು ನೀಡಿರುವುದು, ಹಾಸನ ಜಿಲ್ಲೆಯಲ್ಲಿ ಗೌಡ ಮತ್ತು ಕುಟುಂಬ ಸದಸ್ಯರು ಅಕ್ರಮ ಜಮೀನು ಹೊಂದಿರುವ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಾರೆ.
ಇವನ್ನೂ ಓದಿ