ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದರೋಡೆಯಲ್ಲಿ ಜೆಡಿಎಸ್ ಶಾಸಕ ಜಮೀರ್ ಕೈವಾಡ? (JDS | Kumaraswamy | Zamir ahamad | Police | Court | Robary)
PR
ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಕೆಂಗೇರಿ ಪೊಲೀಸರು ಚಾರ್ಜ್‌ಶೀಟ್ ದಾಖಲಿಸಿದ್ದು,ಜಮೀರ್ ಬಂಧನದ ಸಾಧ್ಯತೆ ಇರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಅಕ್ಟೋಬರ್ 30ರಂದು ಮಾಜಿ ಶಾಸಕ ಅಶ್ವತ್ಥ ಅವರಿಗೆ ಸೇರಿದ 50 ಲಕ್ಷ ರೂಪಾಯಿ ನಗದು ಹಣವನ್ನು ಕೆಂಗೇರಿ ಬಳಿ ದರೋಡೆ ಮಾಡಲಾಗಿತ್ತು. ಅಶ್ವತ್ಥ್ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ದರೋಡೆಗೆ ಒಳಸಂಚು ನಡೆಸಿರುವ ಆರೋಪದಲ್ಲಿ ಬುಧವಾರ ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಜಮೀರ್ ವಿರುದ್ಧ ಡಕಾಯಿತಿ, ಸಂಚು ನಡೆಸಿರುವ ಆರೋಪದಲ್ಲಿಡಿಯಲ್ಲಿ ಕೆಂಗೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪ್ರಕರಣದ ಕುರಿತು ನ್ಯಾಯಾಲಯ ಜಮೀರ್ ವಿರುದ್ಧ ವಾರಂಟ್ ಹೊರಡಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ