ಮುಖ್ಯಮಂತ್ರಿ ಕೇವಲ ಕುರ್ಚಿಯಲ್ಲಿ ಕುಳಿತರೆ ಸಾಲದು. ಸಾಧನೆಗಳ ಮೂಲಕ ಆ ಕುರ್ಚಿಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತಿಳಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ, ಬಿಜೆಪಿ ಸರಕಾರ ಒಂದು ಸಾವಿರ ದಿನಗಳ ಸಾಧನಾ ಸಮಾವೇಶ ಮಾಡಿದೆ. ಈ ಸಾವಿರ ದಿನಗಳನ್ನು ಸಾಕಷ್ಟು ಮುಖ್ಯಮಂತ್ರಿಗಳು ಈಗಾಗಲೇ ಪೂರೈಸಿದ್ದಾರೆ. ಇದನ್ನು ದೊಡ್ಡ ವಿಚಾರ ಮಾಡುವ ಅಗತ್ಯವಿಲ್ಲ ಎಂದರು.
ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಹಗರಣವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಖಂಡಿತಾ ನಾಶವಾಗುತ್ತದೆ ಎಂದು ಭವಿಷ್ಯ ನುಡಿದರು.
ಯಡಿಯೂರಪ್ಪನವರು ಒಂದು ಕಡೆ ಕಾಂಗ್ರೆಸ್ ನಾಶ ಮಾಡುತ್ತೇನೆ ಅಂತಾರೆ, ಇನ್ನೊಂದು ಕಡೆ ಜೆಡಿಎಸ್ ನಾಶ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ ಯಾರಿಂದಲೂ ಯಾವುದೇ ಪಕ್ಷ ನಾಶ ಮಾಡಲು ಸಾಧ್ಯವಿಲ್ಲ ಎಂದರು.