ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡಕ್ಕೆ ನಾರಾಯಣಮೂರ್ತಿ ಕೊಡುಗೆ ಏನು?: ಬರಗೂರು (Vishwa kannada sammelana | Narayana murthy | Baragooru | Infosis)
NRB
ಗಡಿನಾಡು ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನವನ್ನು ಐಟಿ ದಿಗ್ಗಜ ಇನ್ಫೊಸಿಸ್ ನಾರಾಯಣ ಮೂರ್ತಿ ಅವರಿಂದ ಉದ್ಘಾಟನೆ ನೆರವೇರಿಸುವುದು ಬೇಡ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರಿಂದ ಬಂಡವಾಳಗಾರರ ಸಮಾವೇಶವನ್ನು ಉದ್ಘಾಟಿಸಬಹುದೇ ಹೊರತು, ವಿಶ್ವಕನ್ನಡ ಸಮ್ಮೇಳನವಲ್ಲ. ಕನ್ನಡಕ್ಕೆ ಅವರ ಕೊಡುಗೆ ಏನು?ಕನ್ನಡದ ಒಂದೇ ಒಂದು ತಂತ್ರಾಂಶವೂ ಅವರ ಬಹುರಾಷ್ಟ್ರೀಯ ಕಂಪನಿಯಿಂದ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ನಾರಾಯಣಮೂರ್ತಿ ಅವರು ಒಂದನೇ ತರಗತಿಯಿಂದಲೇ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮ ಇರಬೇಕೆಂದು ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಲ್ಲದೆ, ಕಂಪನಿಯ ಉದ್ಯೋಗಿಗಳಿಗಾಗಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಆರಂಭಿಸಲು ಈ ಹಿಂದೆ ಅವರು ಪ್ರಯತ್ನಿಸಿದ್ದರು.ಅಷ್ಟೇ ಅಲ್ಲ ಮೂರ್ತಿ ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದು, 450 ಕೋಟಿ ರೂಪಾಯಿ ವಸೂಲಿಗೆ ಆದೇಶವಾಗಿರುವುದನ್ನೂ ತಾವು ಗಮನಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇವನ್ನೂ ಓದಿ