ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದನ್ನು ಸಿಪಿಐ ವಿರೋಧಿಸಿದೆ.
ಭಾಷಾವಾರು ಪ್ರಾಂತ್ಯಗಳ ರಚನೆಗೆ ವಿರೋಧ ವ್ಯಕ್ತಪಡಿಸಿರುವ ಮೂರ್ತಿಯವರು, ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸುವುದು ಸೂಕ್ತವಲ್ಲ ಒಂದು ವೇಳೆ ಮೂರ್ತಿಯವರು ಸಮ್ಮೇಳನ ಉದ್ಘಾಟಿಸಿದಲ್ಲಿ ಭಾರಿ ಪ್ರತಿಭಟನೆಯನ್ನು ಎದುರಿಸಬೇಕಾದಿತು ಎಂದು ಎಚ್ಚರಿಸಿದೆ.
ಇಂತಹ ವ್ಯಕ್ತಿಯಿಂದ ಸಮ್ಮೇಳನ ಉದ್ಘಾಟಿಸಿದಲ್ಲಿ ಕನ್ನಡ ನಾಡಿಗೆ ಅವಮಾನವಾದಂತಾಗುತ್ತದೆ.ಬಿಜೆಪಿ ಸರಕಾರ ರಾಜ್ಯವನ್ನು ಒಡೆಯುವ ಶಕ್ತಿಗಳಿಗೆ ಮಣೆಹಾಕುತ್ತಿದೆ ಎಂದು ಭಾರತೀಯ ಕಮ್ಯೂನಿಷ್ಟ ಪಕ್ಷ ಆರೋಪಿಸಿದೆ.