ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರಲ್ಲಿ ಭಿನ್ನರ ಮಸಲತ್ತು, ದೆಹಲಿಯಲ್ಲಿ ಸಿಎಂ ಸರ್ಕಸ್ಸು
(BS Yeddyurappa | KS Eshwarappa | Anant Kumar | Jagadish Shetter)
ಬೆಂಗಳೂರಲ್ಲಿ ಭಿನ್ನರ ಮಸಲತ್ತು, ದೆಹಲಿಯಲ್ಲಿ ಸಿಎಂ ಸರ್ಕಸ್ಸು
ಸಭೆ ನಡೆಯುತ್ತಿರುವ ಸ್ಥಳದಿಂದಲೇ ಪ್ರಸಕ್ತ ಯಡಿಯೂರಪ್ಪ ಗುಂಪಿನಲ್ಲಿರುವ ಸಚಿವರು ಮತ್ತು ಶಾಸಕರನ್ನು ಸೆಳೆಯುವ ಯತ್ನ ನಡೆಸಲಾಯಿತು. ಹಲವರಿಗೆ ದೂರವಾಣಿ ಕರೆ ಮಾಡಿ ಒಲಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ನಾಲ್ವರು ಸಚಿವರು ಮತ್ತು ಒಂಬತ್ತು ಶಾಸಕರು ಯಾವುದೇ ಕ್ಷಣದಲ್ಲಿ ಭಿನ್ನರ ಗುಂಪಿಗೆ ಬರುವ ಭರವಸೆ ನೀಡಿದರು.
ಗೃಹಸಚಿವ ಆರ್. ಅಶೋಕ್ ಮತ್ತು ಕಟ್ಟಾ ಸುಬ್ರಮಣ್ಯಂ ನಾಯ್ಡು ಅವರ ಜತೆಗೂ ದೂರವಾಣಿ ಮೂಲಕ ಸಮಾಲೋಚನೆ ನಡೆಸಲಾಯಿತು. ತಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ದಿನಕ್ಕೊಂದು ಹಗರಣ ಬರುತ್ತಿರುವುದು, ಸಚಿವರುಗಳು-ಶಾಸಕರನ್ನು ನಿರ್ಲಕ್ಷಿಸುತ್ತಿರುವುದು, ಅಭಿವೃದ್ಧಿ ಕಾರ್ಯ ಕಡೆಗಣಿಸಿ ಸ್ವಹಿತಾಸಕ್ತಿಯಲ್ಲಿ ಕಾಲ ಕಳೆಯುತ್ತಿರುವುದು ಮುಂತಾದುವುಗಳ ಕುರಿತು ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿ, ಮನವರಿಕೆ ಮಾಡಿಕೊಡಲಿರುವ ಭಿನ್ನರ ನಿಯೋಗವು, ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ದಾಖಲೆಗಳಷ್ಟೇ ಅಲ್ಲದೆ, ಇನ್ನಿತರ ದಾಖಲೆಗಳನ್ನು ಒಪ್ಪಿಸಲು ನಿರ್ಧರಿಸಿದೆ.
ಇನ್ನು ಕೆಲವು ಮೂಲಗಳ ಪ್ರಕಾರ ಭಿನ್ನರ ಗುಂಪು ಸದ್ಯಕ್ಕೆ ವರಿಷ್ಠರಿಗೆ ದೂರು ನೀಡುತ್ತಿಲ್ಲ. ಬದಲಿಗೆ ಮಾರ್ಚ್ 24ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿರುವ ಮುಖ್ಯಮಂತ್ರಿ ವಿರುದ್ಧದ ಇಬ್ಬರು ವಕೀಲರು ನೀಡಿರುವ ದೂರಿನ ತೀರ್ಪು ಬಂದ ನಂತರವಷ್ಟೇ ಕಾರ್ಯಾಚರಣೆ. ಅದುವರೆಗೆ ತಟಸ್ಥ ನೀತಿ ಅನುಸರಿಸುವ ತೀರ್ಮಾನಕ್ಕೆ ಬರಲಾಗಿದೆ.
ಒಟ್ಟಾರೆ ಬಿಜೆಪಿ ಮತ್ತು ಕರ್ನಾಟಕ ಸರಕಾರದ ಮಾನವನ್ನು ಮೂರಾಬಟ್ಟೆ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೊಲಗಿಸುವ ಬಗ್ಗೆ ವಿವಿಧ ಕಾರ್ಯತಂತ್ರಗಳ ಚರ್ಚೆ ನಡೆದಿರುವುದನ್ನು ಬಿಜೆಪಿಯ ಮುಖಂಡರು ಒಪ್ಪಿಕೊಂಡಿದ್ದಾರೆ.
ಸಭೆ ಮುಗಿದ ಬಳಿಕ ರಾತ್ರಿಯೇ ಅನಂತ್ ಕುಮಾರ್ ದೆಹಲಿಗೆ ವಾಪಸ್ಸಾದರು.