ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರಲ್ಲಿ ಭಿನ್ನರ ಮಸಲತ್ತು, ದೆಹಲಿಯಲ್ಲಿ ಸಿಎಂ ಸರ್ಕಸ್ಸು (BS Yeddyurappa | KS Eshwarappa | Anant Kumar | Jagadish Shetter)
PR

ಸಿಎಂ ಕೂಡ ಸುಮ್ಮನೆ ಕೂತಿಲ್ಲ...
ಅತ್ತ ಮುಖ್ಯಮಂತ್ರಿ ಯಡಿಯೂರಪ್ಪ ಬಣವೂ ಸುಮ್ಮನೆ ಕುಳಿತಿಲ್ಲ. ತನ್ನ ವಿರುದ್ಧ ದೂರು ನೀಡುತ್ತಿರುವವರನ್ನು ಹಣಿಯಲು ಅವರು ಕೂಡ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಅದರಲ್ಲಿ ಪ್ರಮುಖವಾದುವು ಹಳೆಯ ಹಗರಣ, ಅವ್ಯವಹಾರಗಳನ್ನು ಕೆದಕುವುದು.

ಅನಂತ್ ಕುಮಾರ್ ಕೇಂದ್ರ ಸಚಿವರಾಗಿದ್ದಾಗ ನಡೆದಿದ್ದ ಹುಡ್ಕೊ ಹಗರಣವನ್ನು ಮತ್ತೆ ಎತ್ತಿ ಹಾಕುವುದು ಯಡಿಯೂರಪ್ಪ ಉದ್ದೇಶ. ಅದೇ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರ ಸಹಕಾರ ಪಡೆದುಕೊಂಡು ತಮಗೆ ಆಪ್ತರಾದ ಐಎಎಸ್ ಅಧಿಕಾರಿ ವಿ.ಪಿ. ಬಳಿಗಾರ್ ಅವರನ್ನು ಹುಡ್ಕೊದ ಪ್ರಮುಖ ಹುದ್ದೆಗೆ ವರ್ಗಾವಣೆ ಮಾಡಿಸಿ ಆಗಿದೆ.

ಅತ್ತ ಶೆಟ್ಟರ್ ಅವರ ಜಾತಕವನ್ನು ಕೂಡ ಸಿಎಂ ಓದುತ್ತಿದ್ದಾರೆ. ಅವರು ಸ್ಪೀಕರ್ ಆಗಿದ್ದಾಗ ಶಾಸಕರ ಭವನದಲ್ಲಿ ನಡೆದಿರುವ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರಿಷ್ಠರಿಗೆ ಒಪ್ಪಿಸುವ ತರಾತುರಿಯಲ್ಲಿದ್ದಾರೆ.