ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂಗೆ ಕ್ಷಮೆ ನೀಡಲು ದೇವರು ಬಿಜೆಪಿ ಹೈಕಮಾಂಡಾ?: ಸಿದ್ದು (BJP | Yeddyurappa | Siddaramaiah | Hassan | Congress | JDS)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪಾಪ ಪ್ರಜ್ಞೆ ಕಾಡುತ್ತಿದ್ದು, ದೇವಸ್ಥಾನಕ್ಕೆ ಹೋಗಿ ಕ್ಷಮೆಯಾಚಿಸಿದ್ದಾರೆ ಎಂದು ಟೀಕಿಸಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ಕ್ಷಮಿಸಿರಬಹುದು. ಆದರೆ ದೇವರು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಅವರು ಗುರುವಾರ ಅರಸೀಕೆರೆ ಪಟ್ಟಣದ ಜೇನ್‌ಕಲ್ ಕ್ರೀಡಾಂಗಣದಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಆಡಳಿತಾರೂಢ ಬಿಜೆಪಿ ಸರಕಾರವನ್ನು ವಿಪಕ್ಷಗಳು ಉರುಳಿಸಬೇಕಾಗಿಲ್ಲ. ಬಿಜೆಪಿ ಶಾಸಕರೇ ತಕ್ಕ ಪಾಠ ಕಲಿಸುತ್ತಾರೆ. ಆ ಮೂಲಕ ಸರಕಾರ ತಾನಾಗಿಯೇ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪನವರಿಗೆ ಪಾಪ ಪ್ರಜ್ಞೆ ಹೆಚ್ಚಾಗಿ ಕಾಡುತ್ತಿರುವುದರಿಂದಲೇ ದೇವಸ್ಥಾನಗಳ ಮೊರೆ ಹೋಗುತ್ತಿದ್ದಾರೆಂದು ಲೇವಡಿ ಮಾಡಿದರು. ಯಡಿಯೂರಪ್ಪರನ್ನು ಕ್ಷಮಿಸಲು ದೇವರೇನು ಬಿಜೆಪಿ ಹೈಕಮಾಂಡಾ ಎಂದು ಕುಟುಕಿದ್ದಾರೆ. ಮುಖ್ಯಮಂತ್ರಿಗಳು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಹೋಮ-ಹವನ ಮಾಡುತ್ತಿರುವುದು ಹೊಸದೇನಲ್ಲ. ಇವರು ಮಾಡಿರುವ ಭ್ರಷ್ಟಾಚಾರ ಹಾಗೂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇವರು ಮಾಡಿರುವ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ರಾಜ್ಯದ ಅತ್ಯಂತ ಭಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭ್ರಷ್ಟಾಚಾರದಲ್ಲಿ ಎತ್ತಿದ ಕೈ ಅವರದ್ದು. ಹಾಗಾಗಿ ಮುಖ್ಯಮಂತ್ರಿ ಸ್ಥಾನದಿಂದ ತೊಲಗಿಸಲು ಜನಜಾಗೃತಿಯಾಗಬೇಕಾಗಿದೆ ಎಂದರು.

ಯಡಿಯೂರಪ್ಪಗೆ ದೇವರೇ ಬುದ್ದಿ ಕಲಿಸಲಿ ಸಿದ್ದರಾಮಯ್ಯ ಕಿಡಿ, ವಿಪಕ್ಷ ನಾಯಕ, ಹಾಸನದ ಅರಸೀಕೆರೆಯಲ್ಲಿ ಮಾತನಾಡಿದ ಅವರು, ಸಿಎಂಗೆ ಶಾಸಕರೇ ಪಾಠ ಕಲಿಸ್ತಾರೆ. ಸರಕಾರ ತಾನಾಗೇ ಪತನವಾಗುತ್ತೆ ಭವಿಷ್ಯ.ಸಿಎಂಗೆ ಪಾಪಪ್ರಜ್ಞೆ ಕಾಡುತ್ತಿದೆ.
ಇವನ್ನೂ ಓದಿ