ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಗ್ನಿ ಪರೀಕ್ಷೆ ಎದುರಿಸುವುದು ನನ್ನ ಜಾತಕದಲ್ಲಿದೆ: ಸಿಎಂ (BJP | Yeddyurappa | Congress | JDS | Hubballi | Jathaka)
WD
ಅಗ್ನಿ ಪರೀಕ್ಷೆ ಎದುರಿಸುವುದೇ ನನ್ನ ಜಾತಕದಲ್ಲಿದೆ. ಹಾಗಾಗಿ ಎಲ್ಲ ತಂತ್ರಗಳನ್ನು ಮಣಿಸಿ ಗೆಲ್ಲುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಸ್ಯಚಟಾಕಿಯ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಜಾತಕದಲ್ಲೇ ಅಗ್ನಿ ಪರೀಕ್ಷೆಗಳನ್ನು ಎದುರಿಸುವ ಸಂದರ್ಭ ಬರುತ್ತವೆ ಅಂತ ಇದೆ. ಈಗಾಗಲೇ ಹಲವು ಅಗ್ನಿಪರೀಕ್ಷೆ ಎದುರಿಸಿ ಗೆದ್ದಿದ್ದೇನೆ. ಮುಂದೆಯೂ ವಿಪಕ್ಷಗಳ ತಂತ್ರದ ವಿರುದ್ಧ ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸವ್ಯಕ್ತಪಡಿಸಿದರು.

ನೆಲಜಲ ರಕ್ಷಣೆಯಲ್ಲಿ ವಿಪಕ್ಷಗಳು ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದ ಮುಖ್ಯಮಂತ್ರಿಯವರು, ಎಲ್ಲ ತಂತ್ರಗಳನ್ನು ಮಣಿಸುವ ಶಕ್ತಿ ನನಗಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಸಮಸ್ಯೆಗಳು ಎದುರಾಗುವುದು ಸಾಮಾನ್ಯ ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲಿ ಬೇಕಾಬಿಟ್ಟಿ ಆರೋಪ ಮಾಡುವ ವಿಪಕ್ಷದವರಿಗೆ ತಕ್ಕಪಾಠ ಮತದಾರರು ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದ ಯಡಿಯೂರಪ್ಪ, ಕೃಷ್ಣಾ ನ್ಯಾಯಾಧೀಕರಣ ಐತೀರ್ಪು ಹಿನ್ನೆಲೆಯಲ್ಲಿ ಮಾ.29ರಂದು ಸ್ಪಷ್ಟೀಕರಣ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇವನ್ನೂ ಓದಿ