ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸೀರೆ ಕೊಟ್ರೆ ಮಹಿಳೆ ಉದ್ಧಾರ ಆಗಲ್ಲ: ಮೋಟಮ್ಮ ಕಿಡಿ (Motamma | Congress | KPCC | Parameshwar | By poll | BJP)
ಮಹಿಳೆಯರಿಗೆ ಸೀರೆ ಕೊಟ್ರೆ ಮಾತ್ರಕ್ಕೆ ಅವರ ಸಬಲೀಕರಣ ಆಗೋದಿಲ್ಲ, ಯಾವ ಉದ್ಧಾರವೂ ಆಗುವುದಿಲ್ಲ. ಬದಲಾಗಿ ಆರ್ಥಿಕ ಸಹಾಯವನ್ನು ಮಾಡಿ ಎಂದು ವಿಪಕ್ಷ ನಾಯಕಿ ಮೋಟಮ್ಮ ಸರಕಾರವನ್ನು ಒತ್ತಾಯಿಸಿದ್ದಾರೆ.

ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ಸರಿಯಾಗಿ ವಿತರಿಸಿ ಅವರಿಗೆ 5 ಸಾವಿರ ರೂ.ಪಾಕೆಟ್ ಮನಿ ನೀಡಿದರೆ ಅವರು ಆರ್ಥಿಕವಾಗಿಯೂ ಒಂದಿಷ್ಟು ಮುಂದುವರಿಯಲು ಸಾಧ್ಯ ಎಂದರು.

ಅಂಬೇಡ್ಕರ್ ಭವನದಲ್ಲಿ ಗುರುವಾರ ಸಮಾಜ ಕಲ್ಯಾಣ ಮಂಡಳಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ರಾಜ್ಯ ಮಟ್ಟದ ಸೇವಾ ಸಂಸ್ಥೆಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಸಂಘಟನೆಗಳು ರಾಜಕೀಯಕ್ಕೆ ಬರಬೇಕು. ಜನಸೇವೆಯಲ್ಲಿ ತೊಡಗುವ ನಾಯಕರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ ಅವರು ಆ ಮೂಲಕ ಶೋಷಿತರ ನೆರವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಮಹಿಳಾ ಸಂಘಟನೆಗಳು ಆರ್ಥಿಕ ನೆರವು ನೀಡುವ ಯೋಜನೆಯನ್ನು ಕೈಗೊಂಡು ಮಹಿಳೆಯರ ಸಬಲೀಕರಣಕ್ಕೆ ನೆರವಾಗಬೇಕೆಂದು ಹೇಳಿದರು.
ಇವನ್ನೂ ಓದಿ