ಹೈಕಮಾಂಡ್ ಎಚ್ಚರಿಕೆಗೆ ಕೊನೆಗೂ ಮಣಿದಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ ಹೊಸ ನಾಯಕನ ಆಯ್ಕೆ ತೊಡಗು ಮುಂದುವರಿದಿರುವುದು ರಾಜ್ಯ ಬಿಜೆಪಿ ಘಟಕಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಸಿಎಂ ಆಪ್ತ ವಲಯಗಳ ಮಾಹಿತಿಯಂತೆ ರಾಜೀನಾಮೆ ಪತ್ರದೊಂದಿಗೆ ಸಿಎಂ ಮಧ್ಯಾಹ್ನದೊಳಗೆ ತೆರಳಲಿದ್ದಾರೆ. ಆದರೆ ಅವರು ವಿಧಿಸಿರುವ ಷರತ್ತುಗಳಿಗೆ ಹೈಕಮಾಂಡ್ ಜಗ್ಗುವುದೇ ಎಂಬುದು ತೀವ್ರ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.
ಸಿಎಂ ಆಪ್ತರಾದ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ನಡುವೆ ಸಿಎಂ ರೇಸ್‌ಗೆ ಭಾರಿ ಪೈಪೋಟಿ ಕಂಡುಬಂದಿದೆ. ರೇಸ್ ಕೋರ್ಸ್‌ನಲ್ಲಿರುವ ನಿವಾಸದಲ್ಲಿ ಸಿಎಂ ಬಣ ಇದೀಗಲೇ ಸಭೆ ಸೇರಿದಿರುವುದಾಗಿ ತಿಳಿದು ಬಂದಿದ್ದು, ಕಳೆದ ಮೂರು ದಿನಗಳಿಂದ ಮುಂದುವರಿದು ಬಂದಿರುವ ಒತ್ತಡದ ತಂತ್ರವನ್ನು ಅನುಸರಿಸುವ ಸಾಧ್ಯತೆಯಿದೆ.