ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ವರದಿ ಹಿನ್ನಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ಎಸ್. ಯಡಿಯೂರಪ್ಪ, ಆರು ತಿಂಗಳಲ್ಲೇ ಆರೋಪ ಮುಕ್ತನಾಗಲಿದ್ದು ಮತ್ತೆ ಸಿಎಂ ಕುರ್ಚಿಗೆ ಮರಳುವ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾತನಾಡಿದ ಹಂಗಾಮಿ ಸಿಎಂ ಯಡಿಯೂರಪ್ಪ, ನಾಳೆಯಿಂದಲೇ ರಾಜ್ಯದ್ಯಾಂತ ತೆರಳಿ ಪಕ್ಷ ಸಂಘಟನೆಗಾಗಿ ದುಡಿಯಲಿದ್ದೇನೆ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಆಯಾ ಪರಿಸ್ಥಿತಿಗೆ ತಕ್ಕಂತೆ ನಾಯಕತ್ವ ಬೆಳವಣಿಗೆ ಸರ್ವೆ ಸಾಮಾನ್ಯ. ಆದರೆ ಯಾವುದೇ ತಪ್ಪು ಮಾಡದೆ ಆರೋಪಿ ಸ್ಥಾನದಲ್ಲಿ ಪ್ರತಿಪಕ್ಷಗಳು ಕೂರಿಸಿರುವುದು ತೀವ್ರ ನೋವನ್ನುಂಟು ಮಾಡಿದ್ದಾರೆ. ಆದರೆ ಈ ಎಲ್ಲ ಆರೋಪಗಳಿಂದ ಮುಕ್ತವಾಗಲಿದ್ದೇನೆ ಎಂದರು.
ರಾಜ್ಯದ ಸರ್ವ ಅಭಿವೃದ್ಧಿಯಿಂದ ನಾನು ರಾಜ್ಯದ್ಯಾಂತ ಪ್ರವಾಸ ಕೈಗೊಳ್ಳಲಿದ್ದೇನೆ. ತಪ್ಪು ಮಾಡದಿದ್ದರೂ ವೃಥಾ ಆರೋಪಗಳನ್ನು ನನ್ನ ಮೇಲೆ ಮಾಡಲಾಗಿದೆ. ಹೀಗಾಗಿ ವಿಚಲಿತನಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ವರಿಷ್ಠರಿಗೆ, ಕಾರ್ಯಕರ್ತರಿಗೆ ವಿಶೇಷವಾಗಿ ಶಿಕಾರಿಪುರ ಜನತೆ ಸೇರಿದಂತೆ ಮಾಧ್ಯಮ ಮಿತ್ರರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.