ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ತಲೆದಂಡಕ್ಕೆ ರೆಡ್ಡಿ ಬ್ರದರ್ಸ್ ಕಾರಣ: ದಿಗ್ವಿಜಯ್ (Digvijay Singh | Yeddyurappa | Lokayukta | Illegal Mining Report | Reddy brothers)
PTI
ಬಳ್ಳಾರಿಯ ರೆಡ್ಡಿ ಬ್ರದರ್ಸ್ ಅನ್ನು ಮೊದಲೇ ಸಂಪುಟದಿಂದ ಹೊರಗಿಟ್ಟಿದ್ದರೆ, ಬಿ.ಎಸ್.ಯಡಿಯೂರಪ್ಪಗೆ ಈ ಗತಿ ಬರುತ್ತಿರಲಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾರ್ಯಕ್ರಮ ನಿಮಿತ್ತ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಅಕ್ರಮ ಗಣಿ ಹಗರಣದ ಅಂತಿಮ ವರದಿಗೆ ಮುನ್ನವೇ ರೆಡ್ಡಿ ಸಹೋದರರನ್ನು ದೂರ ಇಟ್ಟಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು. ಬಿಜೆಪಿ ಸರ್ಕಾರ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು, ಪ್ರತಿ ಹೆಚ್ಚೆಯಲ್ಲೂ ರಾಜಿ ಸಂಧಾನ, ಸಂಪುಟ ರಚನೆಗೆ ಕಸರತ್ತು ನಡೆಸುತ್ತಿದೆ ಎಂದರು.

ಲೋಕಾಯುಕ್ತ ಮತ್ತು ಸಿಎಜಿ ನಡುವೆ ವ್ಯತ್ಯಾಸವಿದೆ. ಲೋಕಾಯುಕ್ತಕ್ಕೆ ತನಿಖೆ ನಡೆಸುವ ಅಧಿಕಾರವಿದೆ. ಆದರೆ, ಸಿಎಜಿಗೆ ಅಂತಹ ಸ್ವಾತಂತ್ರ್ಯವಿಲ್ಲ. ಕಾಮನ್ವೆಲ್ತ್ ಹಗರಣದ ಕುರಿತು ಸಿಎಜಿ ನೀಡಿದ ವರದಿ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಸೋನಿಯಾಗಾಂಧಿ ಆರೋಗ್ಯ ಅವರ ಕುಟುಂಬದ ಖಾಸಗಿ ವಿಚಾರ. ಪಕ್ಷದ ವ್ಯವಹಾರ ನೋಡಿಕೊಳ್ಳಲು ರಾಹುಲ್ ಗಾಂಧಿ ಹಾಗೂ ಹಿರಿಯ ಪಕ್ಷದ ಮುಖಂಡರ ಸಮಿತಿ ರಚಿಸಲಾಗಿದೆ. ಇದರಲ್ಲಿ ನಾನಿಲ್ಲ ಎಂಬುದು ಮುಖ್ಯವಲ್ಲ. ಅದೊಂದು ತಾತ್ಕಾಲಿಕ ವ್ಯವಸ್ಥೆ ಎಂದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಡಿಯೂರಪ್ಪ, ಬಿಜೆಪಿ, ಲೋಕಾಯುಕ್ತ, ಅಕ್ರಮ ಗಣಿ ವರದಿ, ದಿಗ್ವಿಜಯ್ ಸಿಂಗ್, ರೆಡ್ಡಿ ಬ್ರದರ್ಸ್