ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕ್ಷಮೆ ಕೇಳಲ್ಲ, ಹೆಗ್ಡೆ ನಿಜಬಣ್ಣ ಬಯಲು ಮಾಡ್ತೇನೆ: ಕುಮಾರಸ್ವಾಮಿ (Kumaraswamy | Santhosh Hegde | Lokayukta | Radhika | JDS | Deve gowda)
PR
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರಂತರ ದಾಖಲೆ ಬಿಡುಗಡೆ ಮಾಡಿ ಸಮರಕ್ಕೆ ಇಳಿದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದೀಗ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಿರುದ್ಧ ವಾಗ್ದಾಳಿ ಮುಂದುವರಿಸುವ ಮೂಲಕ ಮತ್ತೊಂದು ಕೆಸರೆರಚಾಟಕ್ಕೆ ಮುಂದಾಗಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಂತೋಷ್ ಹೆಗ್ಡೆಯವರ ರಾತ್ರಿ ಜೀವನಕ್ಕೆ ದುಂದು ವೆಚ್ಚ ಮಾಡುತ್ತಿರುವುದಾಗಿ ಹೇಳಿರುವ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಹಾಗಾಗಿ ನಾನು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭ್ರಷ್ಟಾಚಾರ ಯಾವ್ಯಾವ ರೂಪದಲ್ಲಿ ಇರುತ್ತದೆ ಎಂಬ ಕುರಿತು ಚರ್ಚಿಸುವಾಗ ನಾನು ಹೆಗ್ಡೆಯವರ ಬಗ್ಗೆ ಹೇಳಿದ್ದೇನೆ. ನನಗೆ ನೀವು ಸ್ವಲ್ಪ ದಿನ ಅವಕಾಶ ಕೊಡಿ, ಹೆಗ್ಡೆಯವರ ನಿಜ ಬಣ್ಣ ಏನೆಂದು ಬಯಲು ಮಾಡುವುದಾಗಿ ಗುಡುಗಿದ್ದಾರೆ.

ಖಾಸಗಿ ಟಿವಿ ಚಾನೆಲ್‌ವೊಂದರ ಸಂದರ್ಶನದಲ್ಲಿ ಕುಮಾರಸ್ವಾಮಿಯವರು ಮಾತನಾಡುತ್ತ, ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಹಣ ಖರ್ಚು ಮಾಡುತ್ತಾರೆಂಬುದು ಗೊತ್ತಾ? ಹಾಗಂತ ಅವರು ಅದಕ್ಕೆಲ್ಲ ಲೆಕ್ಕ ಕೊಡುತ್ತಾರಾ? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಇಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅದಕ್ಕೆ ಹೆಗ್ಡೆಯವರು ಕೂಡ, ನನಗೆ ಒಬ್ಬಳೇ ಹೆಂಡತಿ ಇರುವುದು. ನನಗೆ ಎರಡನೇ ಮನೆ ಇಲ್ಲ ಎಂದು ತಿರುಗೇಟು ನೀಡಿದ್ದರು.

ಆದರೆ ಇದೀಗ ಮತ್ತೆ ಕಾಲು ಕೆದರಿ ಜಗಳಕ್ಕಿಳಿದಿರುವ ಕುಮಾರಸ್ವಾಮಿ, ಸಂತೋಷ್ ಹೆಗ್ಡೆಯವರ ವಿರುದ್ಧ ನಾನು ಮಾಡಿರುವ ಆರೋಪಕ್ಕೆ ಬದ್ಧನಾಗಿದ್ದೇನೆ. ವಿಷಾದವಾಗಲಿ, ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧವೂ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಏತನ್ಮಧ್ಯೆ ಸಂತೋಷ್ ಹೆಗ್ಡೆಯವರ ವಿರುದ್ಧ ಕುಮಾರಸ್ವಾಮಿಯವರು ನೀಡಿದ್ದ ಹೇಳಿಕೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿ, ದಯವಿಟ್ಟು ಇನ್ಮುಂದೆ ಈ ವಿಷಯದ ಬಗ್ಗೆ ಚರ್ಚೆ ಮುಂದುವರಿಸಬಾರದು ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದರು.

ದಾಖಲೆ ಬಿಡುಗಡೆ ಮಾಡ್ಲಿ-ಸಂತೋಷ್ ಹೆಗ್ಡೆ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ವಿರುದ್ಧದ ಯಾವುದೇ ದಾಖಲೆ ಬಿಡುಗಡೆ ಮಾಡಲಿ. ನಾನು ಇಂತಹ ಹೇಳಿಕೆಗೆಲ್ಲ ಪ್ರತಿಕ್ರಿಯೆ ನೀಡಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕುಮಾರಸ್ವಾಮಿ, ಸಂತೋಷ್ ಹೆಗ್ಡೆ, ಲೋಕಾಯುಕ್ತ, ರಾಧಿಕಾ, ಜೆಡಿಎಸ್, ದೇವೇಗೌಡ