ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಪ್ರಶಸ್ತಿ ತಪ್ಪಿಸಿದ್ದ ಜನಾರ್ದನ ರೆಡ್ಡಿಗೆ ತಕ್ಕ ಶಿಕ್ಷೆಯಾಗಿದೆ: ಅನಂತಮೂರ್ತಿ (Janardana Reddy | Anantha murthy | Illegal Mining | CBI | Bellary | Kannada News | Bangalore News,)
ಪ್ರಶಸ್ತಿ ತಪ್ಪಿಸಿದ್ದ ಜನಾರ್ದನ ರೆಡ್ಡಿಗೆ ತಕ್ಕ ಶಿಕ್ಷೆಯಾಗಿದೆ: ಅನಂತಮೂರ್ತಿ
ಬೆಂಗಳೂರು, ಶುಕ್ರವಾರ, 9 ಸೆಪ್ಟೆಂಬರ್ 2011( 17:12 IST )
PR
ಅಕ್ರಮ ಗಣಿ, ಗಡಿನಾಶ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೊಳಗಾಗಿ ಹೈದರಾಬಾದ್ ಚಂಚಲಗುಡ ಜೈಲಿನಲ್ಲಿರುವ ಬಳ್ಳಾರಿ ಗಣಿಧಣಿ, ಓಬಳಾಪುರಂ ಕಂಪನಿ ಮಾಲೀಕ ಜನಾರ್ದನ ರೆಡ್ಡಿಗೆ ಆರೋಗ್ಯ ದಯಪಾಲಿಸಪ್ಪಾ ಅಂತ ನಾನು ನಂಬದ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ವ್ಯಂಗ್ಯದ ನುಡಿ.
ರೆಡ್ಡಿಗೆ ಜೈಲಿನಲ್ಲಿ ಅನಾರೋಗ್ಯ ಉಂಟಾಗಿ, ಅದನ್ನೇ ಕಾರಣ ಮಾಡಿಕೊಂಡು ಜೈಲಿನಿಂದ ಮುಕ್ತಿಪಡೆದು ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರೆ ಅವರು ಬಹಳ ದಿನ ಜೈಲಿನಲ್ಲಿಯೇ ಇರಬೇಕಾದರೆ ಆರೋಗ್ಯ ತುಂಬಾ ದಿನ ಉತ್ತಮ ಇರಬೇಕಾಗುತ್ತದೆ. ರೆಡ್ಡಿ ಸಹೋದರರು ಹೆಚ್ಚು ಕಾಲ ಜೈಲುಶಿಕ್ಷೆ ಅನುಭವಿಸುವಂತಾಗಬೇಕು ಎಂದು ಕುಹಕವಾಡಿದರು.
ಅನಂತಮೂರ್ತಿಯವರು ತಮ್ಮ ಗೊಡ್ಡು ಸಾಹಿತ್ಯದ ಮೂಲಕ ಕಸದ ಬುಟ್ಟಿಗೆ ಸೇರುತ್ತಾರೆ ಎಂದು ಜನಾರ್ದನ ರೆಡ್ಡಿ ಈ ಹಿಂದೆ ನನ್ನ ಟೀಕಿಸಿದ್ದರು. ಅಷ್ಟೇ ಅಲ್ಲ ಹಂಪಿ ವಿ.ವಿ. ನನಗೆ ನಾಡೋಜ ಪ್ರಶಸ್ತಿ ನೀಡಲು ಮುಂದಾದಾಗ ಅದಕ್ಕೆ ಅಡ್ಡಗಾಲು ಹಾಕಿದ್ದರು. ಈಗ ಅವರೇ ಕಸದ ಬುಟ್ಟಿಗೆ ಸೇರಿದ್ದಾರೆ ಎಂದು ಮೂರ್ತಿ ತಿರುಗೇಟು ನೀಡಿದ್ದಾರೆ.
ರಾಜ್ಯದ ಗಣಿ ಸಂಪತ್ತು ಲೂಟಿ ಹೊಡೆದು, ಹಣ ಮತ್ತು ಅಧಿಕಾರದ ಮದದಿಂದ ಮೆರೆದು ರಾಜಕಾರಣ ಮತ್ತು ಪ್ರಜಾಪ್ರಭುತ್ವಕ್ಕೆ ಮಸಿ ಬಳಿದ ರೆಡ್ಡಿಗಳಿಗೆ ಈಗ ತಕ್ಕೆ ಶಿಕ್ಷೆಯಾಗುತ್ತಿದೆ ಎಂದರು.