ನವದೆಹಲಿ|
Krishnaveni|
Last Modified ಬುಧವಾರ, 6 ಡಿಸೆಂಬರ್ 2017 (10:28 IST)
ನವದೆಹಲಿ: ರಾಷ್ಟ್ರೀಯ ಹಾಕಿ ಆಟಗಾರ ರಿಜ್ವಾನ್ ಖಾನ್
ಮೃತದೇಹ ಆತನ ಕಾರಿನಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದೆ.
ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎನ್ನುತ್ತಿದ್ದರೆ, ಕುಟುಂಬದವರು ಇದು ಕೊಲೆ ಎಂದಿದ್ದಾರೆ. ರಿಜ್ವಾನ್ ಖಾನ್ ಮೃತದೇಹ ದೆಹಲಿಯ ಸರೋಜಿನಿ ನಗರದಲ್ಲಿರುವ ಸ್ನೇಹಿತನ ಮನೆಯ ಹೊರಗೆ ಕಾರಿನಲ್ಲಿ ಪತ್ತೆಯಾಗಿದೆ.
ಮಹಿಳಾ ಸ್ನೇಹಿತೆ ಮನೆಗೆ ಬಂದಿದ್ದ ರಿಜ್ವಾನ್ ಅಲ್ಲಿ ಹಣ ಮತ್ತು ಫೋನ್ ಇಟ್ಟು ಬಂದಿದ್ದ. ನಂತರ ಕಾರಿನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ರಿಜ್ವಾನ್ ತಂದೆ, ಈ ಹಣ ತಾನೇ ಮಗನಿಗೆ ಬೈಕ್ ಖರೀದಿಸಲು ನೀಡಿದ್ದೆ,
ಈ ಸಾವಿನ ಹಿಂದೆ ಸಂಚು ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ಡೌನ್ ಲೋಡ್ ಮಾಡಿಕೊಳ್ಳಿ