ಮುಖ್ಯ ಪುಟ  ಧರ್ಮ  ಇಸ್ಲಾಂ ಧರ್ಮ  ಇಸ್ಲಾಂ ಧರ್ಮದ ಕುರಿತು
 
ಪ್ರವಾದಿಗೆ ತೊಂದರೆ ನೀಡಿದ ವಿರೋಧಿಗಳು
webdunia
Crecent
WD
ಏಕತೆಗಾಗಿ ಪ್ರಜೆಗಳನ್ನು ಕರೆ ತಂದ ಮಾ ನಬಿ (ಸಲ್)ಅವರಿಗೆ ಹಾಗೂ ಇಸ್ಲಾಂ ಮತವನ್ನು ಸ್ವೀಕರಿಸಿದ್ದ ಮುಸಲ್ಮಾನರಿಗೆ ಮಕ್ಕಾದ ಕಾಫಿರರು ನಾನಾ ಬಗೆಯಲ್ಲಿ ಹೇಳಲಾರದಷ್ಟು ತೊಂದರೆಗಳನ್ನು ಕೊಡುತ್ತಿದ್ದರು.

ಮುಖ್ಯವಾಗಿ ಬಡ ಮುಸ್ಲಿಮ್‌ರಿಗೆ ಹಸಿವಿನಿಂದ ಬಾಯಾರಿಕೆಯಿಂದ ನರಳುವಂತೆ ಮಾಡಿದರು. ಮತ್ತೆ ಕೆಲವರಿಗೆ ಉಕ್ಕಿನ ಅಂಗಿಯನ್ನು ಧರಿಸುವುಂತೆ ಹೇಳಿ ಕೋಲುಗಳಿಂದ ಬಾರಿಸುವುದು, ಬಿಸಿಲಿನಲ್ಲಿ ನಿಲ್ಲಿಸಿ ಚಾಟಿ ಏಟು ಕೊಡುವುದು ಮುಂತಾದ ಹಿಂಸೆಗಳನ್ನು ಕೊಡುತ್ತಿದ್ದರು.

ನಬಿ (ಸಲ್) ಅವರಿಗೆ ಸಹಾಯಕವಾಗಿ ಅಬೂ ತಾಲೀಬ್ ಮತ್ತು ಖತೀಜಾ(ರಲಿ) ಅವರು ರಕ್ಷಣೆ ನೀಡುತ್ತಿದ್ದುದರಿಂದ ಸ್ವಲ್ಪ ಮಟ್ಟಿಗೆ ಕಾಫಿರ್‌ರಿಗೆ ಹೆದರಿಕೆಯಿದ್ದಿತಾದರೂ, ಒಂಟಿಯಾಗಿ ಓಡಾಡುವಾಗ ಅವರು ನಡೆದಾಡುವ ದಾರಿಯಲ್ಲಿ ಸೆಗಣಿಯನ್ನು ಹಾಕುವುದು ಮುಂತಾದ ಹಿಂಸೆಯನ್ನು ಕೊಡುತ್ತಿದ್ದರು.

ಒಮ್ಮೆ ಅನೇಕ ಮಂದಿ ಕಾಫಿರ್‌ರು ನಬಿ(ಸಲ್) ಅವರ ಮೇಲೆ ಎರಗಿದರು.ಅವರಲ್ಲೊಬ್ಬನು ಕುತ್ತಿಗೆಗೆ ಒಂದು ಬಟ್ಟೆಯನ್ನು ಸುತ್ತಿ ಎಳೆದಾಡಿದನು. ಆಗ ನಬಿಯವರಿಗೆ ಇನ್ನೇನು ಪ್ರಜ್ಞಾಶೂನ್ಯವಾಗುವು ಸ್ಥಿತಿ ಒದಗಿ ಬಂತು. ಆಗ ಅಬು ಬಕ್ಕರ್ ಸಿದ್ದಿಕಿ(ರಲಿ) ಅದನ್ನು ತಡೆಯಲು ಮುನ್ನುಗ್ಗಿದರು. ಆಗ ಕಾಫಿರ್‌ರು ನಬಿ(ಸಲ್) ಅವರನ್ನು ಬಿಟ್ಟು ಸಿದ್ದಕಿ ಅವರನ್ನು ಹಿಡಿದು ಹೊಡೆಯಲು ಪ್ರಾರಂಭಿಸಿದರು. ಇದರಿಂದಾಗಿ ಸಿದ್ದಕಿ ಅವರಿಗೆ ತಲೆಯಲ್ಲಿ ಒಂದು ದೊಡ್ಡ ಗಾಯವೇ ಆಯಿತು.

ಮತ್ತೊಮ್ಮೆ ನಬಿ(ಸಲ್) ಕಫಾದಲ್ಲಿ ಪ್ರಾರ್ಥನೆಯಲ್ಲಿದ್ದಾಗ ಅಬೂ ಜಹ್ಲಾ ಕೆಲವರನ್ನು ಅಲ್ಲಿಗೆ ಕರೆದುಕೊಂಡು ಬಂದು ಅಲ್ಲಿ ಕುಳ್ಳಿರಿಸಿಕೊಂಡಿದ್ದ. ಪಕ್ಕದಲ್ಲಿ ಒಂದು ಒಂಟೆಯ ಕರಳು ಬಿದ್ದಿತ್ತು ಅಬೂ ಜಹ್ಲಾ ತನ್ನ ಜನರನ್ನು ಕರೆದು ಅದನ್ನು ತೆಗೆದು ಮಹಮ್ಮದನ ಮೇಲೆ ಹಾಕುವಂತೆ ತಿಳಿಸಿದ. ಅವನು ಹೇಳಿದ್ದನ್ನು ಹಾಗೇಯೇ ನಬಿಯವರ ಮೇಲೆಸೆದು ಅದನ್ನು ಅವರ ಕುತ್ತಿಗೆಗೆ ಹಾಕಿದ. ಅವರು ಮೇಲಕ್ಕೇಳಲಾರದೆ ಸ್ವಲ್ಪ ಸಮಯ ಹಾಗೇಯೇ ಕುಳಿತಿರಬೇಕಾಯಿತು.

ಇದನ್ನು ಕಂಡು ಶತ್ರುಗಳೆಲ್ಲರು ನಕ್ಕು ನಲಿದು ಸಂತೋಷಗೊಂಡರು.ಇಬ್ನೂಮಸ್ ಉದ್(ರಲಿ) ಹೇಳಿದರು. ಅಲ್ಲಿ ನಾನು ಇದ್ದೆ. ಭಯಗೊಂಡು ಏನನ್ನು ಮಾಡಲಾಗದೇ ಸುಮ್ಮನಿದ್ದೆ, ಇದರ ವಿಚಾರವನ್ನು ಫಾತಿಮಾ(ರಲಿ) ಅವರೊಂದಿಗೆ ಒಬ್ಬರು ಹೇಳಿದರು. ಅವರು ಅಲ್ಲಿಗೆ ಬಂದು ತಂದೆಯ ಕತ್ತಿನಲ್ಲಿದ್ದ ಒಂಟೆಯ ಕರುಳನ್ನು ತೆಗೆದೆಸೆದರು, ಕಾಫಿರರನ್ನು ಓಡಿಸಿದರು.

ನಬಿ(ಸಲ್) ಅವರು ತಮಗೆ ಎಷ್ಟೋ ತೊಂದರೆಗಳಾದರೂ ಬಹಳ ತಾಳ್ಮೆಯಿಂದಲೇ ಇರುತ್ತಿದ್ದರು. ಅಲ್ಲದೇ ಅವರಿಗಾಗಿ ಒಳ್ಳೆಯದನ್ನು ಬಯಸುತ್ತಿದ್ದರು. ದೇವರೆ! ಅವರಿಗೆ ನ್ಯಾಯಾ ಮಾರ್ಗವನ್ನು ತೋರಿಸಿಕೊಡುವಂತಾಗು ಎಂದು ಆಶೀರ್ವಾದ ಮಾಡುತ್ತಿದ್ದರು. ಆದರೆ ಈ ಬಾರಿ ಕಾಫಿರ್‌ರು ಹೀಗೆ ಹೀನಾಯವಾಗಿ ನಡೆದುಕೊಂಡ ಕಾರಣದಿಂದ ನಬಿ(ಸಲ್) ಅವರು "ಅಲ್ಲಾಹ್ ವೇ! ಈ ಖುರೈಷಿಗಳಿಗೆ ನೀನೆ ಸರಿಯಾದ ದಂಡನೆಯನ್ನು ಕೊಡಬೇಕು"ಎಂದು ಮೂರು ಬಾರಿ ಪ್ರಾರ್ಥನೆ ಮಾಡಿಕೊಂಡರು.

ಡಾ.ವಿ. ಗೋಪಾಲಕೃಷ್ಣ
ಮತ್ತಷ್ಟು
ಮಾತೆ ಖತೀಜಾವಿನ ಮರಣ
ಮೊಹರಂ ದಿನ-ಮೆರವಣಿಗೆಗಳು
ಇಸ್ಲಾಂ ಧರ್ಮ- ಪ್ರವಾದಿಯ ಆವಿರ್ಭಾವ
ಮೊಹರಂ ಹಬ್ಬ ಆಚರಿಸುವುದು ಏಕೆ?
ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು
ಇಸ್ಲಾಂ- ಹುಟ್ಟು, ನಂಬಿಕೆಗಳು