Widgets Magazine

ಲಂಕಾ ದಹನ ಮಾಡಿದ ಭಾರತ ಸೆಮಿಗೆ ಲಗ್ಗೆ

Football
ನವದೆಹಲಿ| ನಾಗರಾಜ ಬಿ.|
PTI


ಪ್ರತಿಷ್ಠಿತ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ನ ಮಹತ್ವದ ಪಂದ್ಯದಲ್ಲಿ ನೆರೆಯ ಶ್ರೀಲಂಕಾ ತಂಡವನ್ನು 3-0 ಅಂತರದಲ್ಲಿ ಸದೆಬಡಿದಿರುವ ಆತಿಥೇಯ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕನಿಷ್ಠ ಡ್ರಾ ದಾಖಲಿಸಿದರೂ ಭಾರತದ ಅಂತಿಮ ನಾಲ್ಕರ ಘಟ್ಟದ ಹೋರಾಟ ಸುಲಭವಾಗುತ್ತಿತ್ತು. ಆದರೆ ಭೂತಾನ್ ವಿರುದ್ಧ 5-0 ಗೆಲುವಿನ ಹುಮ್ಮಸ್ಸಿನಲ್ಲಿದ್ದ ಭಾರತೀಯ ಪಡೆಯು ಮತ್ತದೇ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿತ್ತು.

ಪಂದ್ಯದ ಮೊದಲಾರ್ಧದಲ್ಲಿ ಸಮಬಲದ ಹೋರಾಟ ನೀಡಿದ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿರಲಿಲ್ಲ. ಆದರೆ 71ನೇ ನಿಮಿಷದಲ್ಲಿ ರಾಜಶೇಖ್ ಹಾಗೂ 80 ಹಾಗೂ 84ನೇ ನಿಮಿಷಗಳಲ್ಲಿ ಸ್ಟೀವನ್ ದಾಸ್ ಮತ್ತು ಸುಶಿಲ್ ಕುಮಾರ್ ಸಿಂಗ್ ಗೋಲು ಬಾರಿಸಿ ಗೆಲುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸಿದರು.

ಭಾರತ ಇದೀಗ ನಡೆಯಲಿರುವ ಫೈನಲ್‌ಗಾಗಿನ ಹಣಾಹಣಿಯಲ್ಲಿ ಮಾಲ್ಡೀವ್ಸ್ ತಂಡವನ್ನು ಎದುರಿಸಲಿದೆ.


ಇದರಲ್ಲಿ ಇನ್ನಷ್ಟು ಓದಿ :