ಗೋಪಿಚಂದ್ ವಿರುದ್ಧ ಸಿಡಿದೆದ್ದ ಜ್ವಾಲಾ ಗುಟ್ಟಾ

ಹೈದರಾಬಾದ್| Krishnaveni K| Last Modified ಗುರುವಾರ, 11 ಜೂನ್ 2020 (10:33 IST)
ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ ಕೇವಲ ಹೈದರಾಬಾದ್, ತೆಲುಗು ಮೂಲದವರು ಅಥವಾ ನಿರ್ದಿಷ್ಟ ಬ್ಯಾಡ್ಮಿಂಟನ್ ಅಕಾಡೆಮಿಯವರು ಮಾತ್ರ  ಮುಂಚೂಣಿಗೆ ಬರುತ್ತಿರುವುದೇಕೆ ಎಂದು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕಿಡಿ ಕಾರಿದ್ದಾರೆ.
 

ಕೋಚ್ ಪುಲ್ಲೇಲ ಗೋಪಿಚಂದ್ ಮೇಲೆ ಈ ರೀತಿ ಅವರು ಆಕ್ರೋಶ ಹೊರಹಾಕಿದ್ದಾರೆ. ಗೋಪಿಚಂದ್ ಆಡುತ್ತಿದ್ದಾಗ ಬೇರೆ ರಾಜ್ಯದವರೂ ಭಾರತದ ಪರ ಆಡುತ್ತಿದ್ದರು. ಆದರೆ ಕಳೆದ 10-12 ವರ್ಷಗಳಲ್ಲಿ ಹೈದರಾಬಾದ್ ಅಥವಾ ತೆಲುಗು ಮೂಲದ ಆಟಗಾರರು ಮಾತ್ರ ಮುಂಚೂಣಿಗೆ ಬರುತ್ತಿದ್ದಾರೆ.
 
ಪದಕ ಗೆದ್ದರೆ ಗೋಪಿಚಂದ್ ಗೆ ಹೊಗಳಿಕೆ ಸಲ್ಲಿಸಲಾಗುತ್ತದೆ. ಸೋತರೆ ನಮ್ಮನ್ನು ದೂಷಿಸಲಾಗುತ್ತದೆ. ಹಲವು ವಿದೇಶೀ ಕೋಚ್ ಗಳು ಅವಮಾನ ಅನುಭವಿಸಿ ಅರ್ಧಕ್ಕೆ ವೃತ್ತಿ ಬಿಟ್ಟು ಹೊರಟಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ಜ್ವಾಲಾ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :