ಇತಿಹಾಸದ ಹೊಸ್ತಿಲಲ್ಲಿ ಕಮರಿ ಹೋಯ್ತು ಜೊಕೊವಿಕ್ ಕನಸು: ಕಣ್ಣೀರಿಟ್ಟ ಟೆನಿಸ್ ತಾರೆ

ನ್ಯೂಯಾರ್ಕ್| Krishnaveni K| Last Modified ಸೋಮವಾರ, 13 ಸೆಪ್ಟಂಬರ್ 2021 (09:40 IST)
ನ್ಯೂಯಾರ್ಕ್: ಒಂದೇ ಕ್ಯಾಲೆಂಡರ್ ನಲ್ಲಿ ಎಲ್ಲಾ ಗ್ರ್ಯಾಂಡ್ ಸ್ಲಾಂ ಗೆದ್ದು ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಕನಸು ಭಗ್ನಗೊಂಡಿದೆ.
Photo Courtesy: Google

 
ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ರಷ್ಯಾದ ಡೇನಿಯಲ್ ಮಡ್ವಡೇವ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿ ಜೊಕೊವಿಕ್ ದಾಖಲೆ ಮಾಡುವ ಅವಕಾಶವನ್ನು ತಪ್ಪಿಸಿಕೊಂಡು ಕೋರ್ಟ್ ನಲ್ಲೇ ಕಣ್ಣೀರಿಟ್ಟರು.
 
ಇಡೀ ಟೆನಿಸ್ ಜಗತ್ತು ಜೊಕೊವಿಕ್ ದಾಖಲೆಗಾಗಿ ಇಂದು ಕಾದು ಕುಳಿತಿತ್ತು. ಆದರೆ ಮಡ್ವಡೇವ್ ವಿರುದ್ಧ 6-4,6-4,6-4 ಅಂತರದಿಂದ ಸೋತು ಆಘಾತ ಅನುಭವಿಸಿದರು. ವಿಶೇಷವೆಂದರೆ ಈ ಪಂದ್ಯದಲ್ಲಿ ಮಡ್ವಡೇವ್ ಎಡಕಾಲಿನ ಸ್ನಾಯು ಸೆಳೆತಕ್ಕೊಳಗಾಗಿದ್ದರೂ ಕೊನೆಯವರೆಗೂ ಬಿಟ್ಟುಕೊಡದೇ ಪಂದ್ಯ ಗೆದ್ದರು. ಜೊಕೊವಿಕ್ ಗೆ ನ್ಯೂಯಾರ್ಕ್ ನಲ್ಲಿ ಹಿಂದೆಂದೂ ಕಾಣದಂತಹ ಅಭಿಮಾನಿಗಳ ಬೆಂಬಲ ಸಿಕ್ಕಿತ್ತು. ಆದರೆ ಸರ್ಬಿಯಾದ ಆಟಗಾರನಿಗೆ ಈ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟಿತ್ತು.
ಇದರಲ್ಲಿ ಇನ್ನಷ್ಟು ಓದಿ :